ಬೆಂಗಳೂರು: ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮಕ್ಕೆ ಯಾಕೋ ಕಾಲ ಕೂಡಿ ಬರುತ್ತಿಲ್ಲ ಅನ್ನುವಂತಾಗಿದೆ. ಯಾಕಂದರೆ ಒಂದಿಲ್ಲೊಂದು ಕಾರಣಕ್ಕೆ ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಿಕೆಯಾಗಿದೆ.
ಈ ಹಿಂದೆ ಜನೋತ್ಸವ ಕಾರ್ಯಕ್ರಮ ನಿಗದಿಯಾದ್ದಾಗ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆಯಿತು. ಹೀಗಾಗಿ ಈ ಕಾರ್ಯಕ್ರಮವನ್ನ ರದ್ದು ಮಾಡಲಾಗಿತ್ತು. ಇನ್ನು ಮತ್ತೆ ಇದೇ ತಿಂಗಳು ೨೮ಕ್ಕೆ ಜನೋತ್ಸವ ನಡೆಸುವುದಾಗಿ ತಿರ್ಮಾನಿಸಲಾಗಿತ್ತು. ಆದರೆ ಗೌರಿ- ಗಣೇಶ ಹಬ್ಬದಲ್ಲಿ ಜನೋತ್ಸವ ಕಾರ್ಯಕ್ರಮ ಬೇಡವೆಂದು ಮತ್ತೆ ಕಾರ್ಯಕ್ರಮವನ್ನ ಮುಂದೂಡಲಾಗಿತ್ತು.