ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಆ್ಯಂಬುಲೆನ್ಸ್ ರಸ್ತೆ ಅಪಘಾತ ಸಂಭವಿಸಿದೆ. ಸ್ಪೀಡ್ ಲಿಮಿಟ್ ಇಲ್ಲದೆ ಆ್ಯಂಬುಲೆನ್ಸ್ ಗಳ ಓಡಾಡುತ್ತಿದೆ. ಹೈ ಸ್ಪೀಡ್ ನಲ್ಲಿದ್ದ ರೆಡ್ ಆ್ಯಂಬುಲೆನ್ಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಮಹಿಳೆ ಓಡಿಸುತ್ತಿದ್ದ ಆಕ್ಟಿವಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಡಿಕ್ಕಿ ರಭಸಕ್ಕೆ ಆ್ಯಕ್ಟಿವ್ ಬೈಕ್ ಚೂರು ಚೂರು ಆಗಿದೆ. ಮತ್ತಿಕೆರೆ ಬಸ್ ಸ್ಟಾಪ್ ಬಳಿ 11:30 ಕ್ಕೆ ನಡೆದಿರುವ ಘಟನೆ ನಡೆದಿದೆ.ಸದ್ಯ ಗಾಯಾಳು ಸ್ಥಳಿಯ ಆಸ್ಪತ್ರೆಗೆ ದಾಖಲು ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಯಶವಂತಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.