ಗುರ್ಗಾಂವ್: ಬಸ್ ಕಾಯುತ್ತಿದ್ದ ಪ್ರಯಾಣಿಕರೊಬ್ಬರ ಮೊಬೈಲ್ ಕದ್ದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್ಪಿ ಸಿಂಗ್ ಅವರು, ಫರಿದಾಬಾದ್ನಲ್ಲಿ ನೆಲೆಸಿರುವ ಅರ್ಜುನ್ಗೆ 25,000 ದಂಡ ವಿಧಿಸಿದ್ದಾರೆ. ದಂಡವನ್ನು ಠೇವಣಿ ಮಾಡಲು ತಪ್ಪಿದಲ್ಲಿ ಅಪರಾಧಿ ಇನ್ನೂ ಆರು ತಿಂಗಳು ಜೈಲಿನಲ್ಲಿ ಇರಬೇಕಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಪೊಲೀಸ್ ದಾಖಲೆಗಳ ಪ್ರಕಾರ, ಕಳೆದ ವರ್ಷ ಮಾರ್ಚ್ 21 ರಂದು ಈ ಘಟನೆ ನಡೆದಿದೆ.
ಬಸ್ ನಿಲ್ದಾಣದ ಬಳಿ ರಸ್ತೆಬದಿಯಲ್ಲಿ ಅನಿಲ್ ಕುಮಾರ್ ಎಂಬುವರು ನಿಂತಿದ್ದಾಗ ಅರ್ಜುನ್ ಅವರ ಬಳಿಯಿದ್ದ ಮೊಬೈಲ ಕದ್ದು ಪರಾರಿಯಾಗಿದ್ದ. ಅನಿಲ್ ಅವರ ಫೋನ್ ಕವರ್ನಲ್ಲಿ 6,000 ರೂ. ನಗದು ಇತ್ತು. ಈ ಬಗ್ಗೆ ಸೆಕ್ಟರ್ 14 ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದೆ. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆಯ ವೇಳೆ ಅರ್ಜುನ್ನಿಂದ ಕದ್ದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಇದೀಗ ಆರೋಪಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
Big Breaking News: ಕಾಬೂಲ್ ನಲ್ಲಿ ಭೀಕರ ಸ್ಫೋಟ: 20 ಸಾವು, 40 ಮಂದಿಗೆ ಗಾಯ -Kabul blast: At least 20 killed
ಹಿಂದುಳಿದ ವರ್ಗದವರಿಗೆ ಮಹತ್ವದ ಮಾಹಿತಿ: ಸಾಲ ಸೌಲಭ್ಯ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ