ಬಳ್ಳಾರಿ: ಬಳ್ಳಾರಿ ನಗರ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಗೃಹ ಬಳಕೆಯ ಮಾಸಿಕ 75 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಕುಟುಂಬಗಳ ಗೃಹ ಬಳಕೆಯ ಮಾಸಿಕ 75 ಯೂನಿಟ್ಗಳವರೆಗಿನ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ಸರ್ಕಾರ ಆದೇಶವನ್ನು ಹೊರಡಿಸಿರುತ್ತದೆ.
*ಅರ್ಹತೆ: ಗ್ರಾಹÀಕರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಾಗಿರಬೇಕು. ಜಾತಿ ಪ್ರಮಾಣ ಪತ್ರ (ಆರ್ಡಿ ಸಂಖ್ಯೆ ಸಹಿತ) ಹೊಂದಿರಬೇಕು. ಬಿ.ಪಿ.ಎಲï ಮತ್ತು ರೇಷನ್ ಕಾರ್ಡ್ (ಆರ್ಸಿ ಸÀಂಖ್ಯೆ ಸಹಿತ) ಹೊಂದಿರಬೇಕು. ಆಧಾರ್ ಕಾರ್ಡ್ ಹೊಂದಿದ್ದು, ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರಬೇಕು.
*ಷರತ್ತು/ನಿಬಂಧನೆಗಳು: ಅರ್ಹ ಗ್ರಾಹಕರ ವಿದ್ಯುತ್ ಸ್ಥಾವರಗಳಿಗೆ ಕಡ್ಡಾಯವಾಗಿ ಮಾಪಕವನ್ನು ಅಳವಡಿಸಲಾಗುವುದು ಹಾಗೂ ಪ್ರತಿ ತಿಂಗಳು ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.ಈ ಸೌಲಭ್ಯಕ್ಕೆ ಅರ್ಹರಾಗುವ ಗ್ರಾಹಕರುಗಳು ಮಾಸಿಕ ವಿದ್ಯುತ್ ಬಿಲ್ಲನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಪಾವತಿಸುವುದು. ಅರ್ಹ ವಿದ್ಯುತ್ ಗ್ರಾಹಕರುಗಳು 2022ನೇ ಏ.30ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸತಕ್ಕದ್ದು. ಮಾಸಿಕ ಬಳಕೆಯು 250 ಯೂನಿಟ್ಗಳಿಗಿಂತ ಹೆಚ್ಚುವರಿ ಯೂನಿಟ್ಗಳಿದಲ್ಲಿ ಈ ಯೋಜನೆಗೆ ಆರ್ಹರಾಗಿರುವುದಿಲ್ಲ. ಬಡತನರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕುಟುಂಬಗಳ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯ ಅರ್ಜಿ ಪಡೆಯಲು ಅರ್ಹ ಫಲಾನುಭವಿಗಳು ಕರ್ನಾಟಕ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಆರಂಭದಿಂದ ಅಂತ್ಯದವರೆಗಿನ ಸೇವೆಗಳಿಗೆಗಾಗಿರುವ “ಸುವಿಧಾ” (End-End Services Portal) suvidha.karnataka.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆÉÉ.
*ಅರ್ಜಿ ಸಲ್ಲಿಸುವ ವಿಧಾನ: suvidha.karnataka.gov.inಗೆ ಭೇಟಿ ನೀಡಿ “ಇತರೆ” ಯೊಜನೆಗಳಡಿಯಲ್ಲಿ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಆಯ್ಕೆ ಮಾಡಿ ಕರ್ನಾಟಕ ನಿವಾಸಿ ಎಂಬುದನ್ನು ಖಚಿತ ಪಡಿಸಿ ಲಿಂಗವನ್ನು ನಮೂದಿಸಿ ಮುಂದುವರೆಯಿರಿ. ವಯಸ್ಸಿನ ಗುಂಪನ್ನು ಆಯ್ಕೆ ಮಾಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿರುವುದು, ಬಡತನದ ರೇಖೆಗಿಂತ ಕೆಳಗಿರುವುದರ ಕುರಿತು ಸೂಕ್ತ ಆಯ್ಕೆ ಮಾಡಿ, ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ನಮೂದಿಸಿ ಅದಕ್ಕೆ ಬರುವ ಓಟಿಪಿ ಸಲ್ಲಿಸಿರಿ. ನಿಮ್ಮ ಆಧಾರ್ ಸಂಖ್ಯೆ, ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ, ಬಾಡಿಗೆ ಒಪ್ಪಂದ ಪ್ರಮಾಣ ಪತ್ರ, ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಭಾವಚಿತ್ರದಂತಹ ಅವಶ್ಯ ದಾಖಲಾತಿಗಳನ್ನು ಜೊತೆಗಿರಿಸಿಕೊಂಡು ಅರ್ಜಿ ಸಲ್ಲಿಸುವುದನ್ನು ಮುಂದುವರಿಸಿರಿ. ಅರ್ಜಿದಾರರ ತಾಲ್ಲೂಕು, ಆರ್ಥಿಕ ಸ್ಥಿತಿಗತಿ, ಜಾತಿ ಪ್ರಮಾಣ ಪತ್ರದ ಆರ್ಡಿ ಸಂಖ್ಯೆ ಮತ್ತು ಬಿಪಿಎಲ್ ಪಡಿತರ ಕಾರ್ಡ್ನಲ್ಲಿರುವಂತೆ ಕುಟುಂಬದ ಸದಸ್ಯರ ವಿವರ, ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವಿದ್ಯುತ್ ಸಂಪರ್ಕದ ಖಾತೆ ಐಡಿ (GESCOM ELECTRICITY CONNECTION ID), ಬಿಲ್ಲಿನಲ್ಲಿರುವ ಗ್ರಾಹಕರ ಹೆಸರು, ಹಿಂದಿನ ತಿಂಗಳಿನ ಬಿಲ್ಲಿನ ಸ್ಥಿತಿಗತಿ, ವಿದ್ಯುತ್ ಸಂಪರ್ಕ ನಿಮ್ಮ ಹೆಸರಿನಲ್ಲಿದೆಯೇ ಎಂಬುವುದನ್ನು ಖಚಿತ ಪಡಿಸಿ CAPTCHA ವನ್ನು ನಮೂದಿಸಿ ಮುಂದುವರೆಯಿರಿ. ನಂತರ ಎಲ್ಲಾ ವಿವರವನ್ನು ಸರಿಯಾಗಿರುವುದನ್ನು ಮತ್ತೊಮ್ಮೆ ಖಚಿತ ಪಡಿಸಿ ಮುಂದೆ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ನಮೂದಿಸಿ ವಿವರಗಳನ್ನು ಇ-ಸೈನ್ (e-sign) ಮಾಡಿ ಸಲ್ಲಿಸಿರಿ. ಪೂರ್ಣಗೊಂಡ ಅರ್ಜಿಯನ್ನು ವಿಕ್ಷೀಸಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳಬಹುದು.
ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ಗೆ ಬಂದಿರುವ ಓಟಿಪಿ ನಂಬರ್ನ್ನು ನಮೂದಿಸುವುದು ಕಡ್ಡಾಯವಾಗಿರುವುದರಿಂದ ಈಗಾಗಲೇ ಅರ್ಹ ಗ್ರಾಹಕರು ಉಪವಿಭಾಗದಲ್ಲಿ ಅರ್ಜಿ ನೀಡಿದ್ದಲ್ಲಿ ಸದರಿ ಗ್ರಾಹಕರು ಇನ್ನೊಮೆ ಆನ್ಲÉೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.