ನವದೆಹಲಿ: ಮೊಬೈಲ್ ಫೋನ್ ಗಳು ಮತ್ತು ಇತರ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್ ಅಳವಡಿಸಿಕೊಳ್ಳುವ ಆಯ್ಕೆಯನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಇಂದು ಕೇಂದ್ರ ಸರ್ಕಾರವು ಬುಧವಾರ ಉದ್ಯಮದ ಪಾಲುದಾರರೊಂದಿಗೆ ಸಭೆ ನಡೆಸಲಿದೆ. ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಲ್ಯಾಪ್ ಟಾಪ್ ಗಳು ಮತ್ತು ಮೊಬೈಲ್ ಗಳು ಸೇರಿದಂತೆ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳ ತಯಾರಕರು ಹಾಜರಿದ್ದಾರೆ ಎನ್ನಲಾಗಿದೆ.
ವಲಯ-ನಿರ್ದಿಷ್ಟ ಸಂಘಗಳು, ಕೈಗಾರಿಕಾ ಸಂಸ್ಥೆಗಳು ಸಿಐಐ ಮತ್ತು ಎಫ್ಐಸಿಸಿಐ ಮತ್ತು ಐಐಟಿ ದೆಹಲಿ ಮತ್ತು IIT BHU ಪ್ರತಿನಿಧಿಗಳು ಕೂಡ ಇಂದು ನಡೆಯುತ್ತಿರುವ ಸಭೆಯಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ, ಯುರೋಪಿಯನ್ ಯೂನಿಯನ್ 2024 ರ ವೇಳೆಗೆ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗೆ ಯುಎಸ್ಬಿ-ಸಿ ಪೋರ್ಟ್ ಸಾಮಾನ್ಯ ಚಾರ್ಜಿಂಗ್ ಸ್ಟ್ಯಾಂಡರ್ಡ್ ಅನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿತು. ಇದೇ ರೀತಿಯ ಬೇಡಿಕೆ ಯುಎಸ್ ನಲ್ಲೂ ಇದೆ.