ಬೆಂಗಳೂರು: ನಗರದಲ್ಲಿ ಪಿಎಸ್ ಐ ಆಗುವ ಕನಸು ಕಂಡಿದ್ದವ ಕಳ್ಳ ಆದ ಕಥೆವೊಂದು ನಡೆದಿದೆ. ಪೊಲೀಸ್ ಆಗಲು ಆಗಲಿಲ್ಲ ಅಂತ ನಕಲಿ ಪೊಲೀಸ್ ಆಗಿ ಕಳ್ಳತನ ಹಾಗೂ ಸುಲಿಗೆಗೆ ಇಳಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ದರಾಮಯ್ಯ- ಶ್ರೀರಾಮುಲು ಒಳ ಒಪ್ಪಂದ ನನಗೆ ಗೊತ್ತಿಲ್ಲ; ಅದರ ಅನುಭವ ನನಗಿಲ್ಲ- ಡಿ.ಕೆ ಶಿವಕುಮಾರ್
23 ವರ್ಷದ ವಿನಯ್ ಕುಮಾರ್ ಬಂಧಿತ ಆರೋಪಿ.ವಿಜಯನಗರದ ಬಿಸ್ಲಿ ಇರುವ ಮೂಡಲಪಾಳ್ಯ ನಿವಾಸಿ ವಿನಯ್ ಕುಮಾರ್ ಪಿಎಸ್ ಐ ಆಗಲು ತಯಾರಿ ನಡೆದಿತ್ತು. ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಟಾಫರ್ ಆಗಿದ್ದನು. ಆದರೆ ಅಂದುಕೊಂಡಂತೆ ಪೊಲೀಸ್ ಇಲಾಖೆಗೆ ಸೇರಲು ಆಗಲಿಲ್ಲ ಅಂತ ಕಳವು ಮಾಡಲಾರಂಭಿಸಿದ್ದಾನೆ. ಮೊದಲಿಗೆ ಚಂದ್ರ ಲೇಔಟ್ ನಲ್ಲಿ ಬೈಕ್ ಕಳವು ಮಾಡಿದ್ದನು.
ನಂತ್ರ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಹೆಲ್ಮೆಟ್ ಧರಿಸಿ ವಾಹನಗಳನ್ನು ನಿಲ್ಲಿಸಿ ಸುಲಿಗೆ ಮಾಡ್ತಿದ್ದ. ಈ ವಿಷಯ ತಿಳಿದು ಪೊಲೀಸರು ಆತನನ್ನು ಬಂಧಿಸಿದ್ದಾರೆ.