ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಒಂದೆಡೆ ‘ಬಿಸಿಯೂಟ ಕಾರ್ಯಕರ್ತೆ’ಯ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ, ಇನ್ನೊಂದೆಡೆ ‘ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸ್ಥಗಿತ’ ಗೊಂಡು ಎರಡು ದಿನವಾಗಿದೆ. ಬಿಸಿಯೂಟ ಕಾರ್ಯಕರ್ತೆ ಪ್ರೊಟೆಸ್ಟ್ನಿಂದಾಗಿ ಸರ್ಕಾರ ಬಿಸಿ ತಟ್ಟಿದಂತಾಗಿದೆ
BIGG NEWS: ಸಹಜ ಸ್ಥಿತಿಯತ್ತ ಮರಳಿದ ಶಿವಮೊಗ್ಗ: ಎಂದಿನಂತೆ ವಹಿವಾಟು ಆರಂಭ; ಹೂವಿನ ಮಾರುಕಟ್ಟೆ ಓಪನ್
ಕೆಲಸದಿಂದ 6,500 ಬಿಸಿಯೂಟ ಕಾರ್ಯಕರ್ತೆಯರ ವಜಾಗೊಳಿಸಿದ ಹಿನ್ನೆಲೆ ಫ್ರೀಡಂಪಾರ್ಕ್ನಲ್ಲಿ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ಮಾಡಿದ್ದು, ಇಂದು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.
BIGG NEWS: ಸಹಜ ಸ್ಥಿತಿಯತ್ತ ಮರಳಿದ ಶಿವಮೊಗ್ಗ: ಎಂದಿನಂತೆ ವಹಿವಾಟು ಆರಂಭ; ಹೂವಿನ ಮಾರುಕಟ್ಟೆ ಓಪನ್
ಕಾರ್ಯಕರ್ತೆಯರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಬಿಸಿಯೂಟ ಸ್ಥಗಿತ ಮಾಡಲಾಗಿದೆ. ಸರ್ಕಾರದ ಗಮನಸೆಳೆಯಲು ಈ ರೀತಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗುದ್ದಾರೆ.
ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆಗಳೇನು..?
• 60 ವರ್ಷ ಮೇಲ್ಪಟ್ಟ ನೌಕರರನ್ನು ಕೆಲಸದಿಂದ ವಜಾಗೊಳಿಸುವಾಗ 1 ಲಕ್ಷ ನಿವೃತ್ತಿ ವೇತನ ಕೊಡಬೇಕು
• ಬಿಸಿಯೂಟ ನೌಕರರನ್ನು ಖಾಯಂಗೊಳಿಸಬೇಕು, ಇವರನ್ನು ಸರ್ಕಾರಿ ಕಾರ್ಮಿಕರೆಂದು ಗುರುತಿಸಬೇಕು
• ಬಜೆಟ್ ನಲ್ಲಿ ಘೋಷಣೆ ಮಾಡಿದ್ದ 1 ಸಾವಿರ ರೂ. ಗಳನ್ನು ಜಾರಿ ಮಾಡಬೇಕು.
• ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಟ್ಟಿಕೊಡಬೇಕು.
• ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು
• ಬಿಸಿಯೂಟ ನೌಕರರ ವೇತನವನ್ನು 5 ಸಾವಿರಕ್ಕೆ ಹೆಚ್ಚಳ ಮಾಡಬೇಕು.
BIGG NEWS: ಸಹಜ ಸ್ಥಿತಿಯತ್ತ ಮರಳಿದ ಶಿವಮೊಗ್ಗ: ಎಂದಿನಂತೆ ವಹಿವಾಟು ಆರಂಭ; ಹೂವಿನ ಮಾರುಕಟ್ಟೆ ಓಪನ್