ಬೆಂಗಳೂರು: ತನ್ನ ಕಾರಿಗೆ ಕಾರಿಗೆ ಆಂಬ್ಯುಲೆನ್ಸ್ ಸೈರೆನ್ ಹಾಕೊಂಡು ಸುತ್ತಾಡುತ್ತಿದ್ದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಅಳಿಯ ರಾಜೀವ್ ರಾಥೋಡ್ಗೆ ಭಾರಿ ದಂಡ ವಿಧಿಸಲಾಗಿದೆ.
ಹೌದು, ಸ್ಯಾಂಡಲ್ವುಡ್ ನಟನೂ ಆಗಿರುವ ರಾಜೀವ್ ರಾಥೋಡ್ ತನ್ನ KA51 MG 9299 ನಂಬರಿನ ಆಡಿ ಕ್ಯೂ 7 ಕಾರಿಗೆ ಆಂಬ್ಯುಲೆನ್ಸ್ ಸೈರೆನ್ ಹಾಕಿಕೊಂಡು ಮನಬಂದಂತೆ ಸುತ್ತಾಡಿದ್ದು, ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ. ಹೀಗಾಗಿ ವಿಜಯನಗರ ಸಂಚಾರಿ ಪೊಲೀಸರು ರಾಥೋಡ್ ಅವರಿಂದ ದಂಡ ಕಟ್ಟಿಸಿಕೊಂಡಿದ್ದು, ಮತ್ತೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರದಿಂದ ವಿವಿಧ ಮಠ, ಟ್ರಸ್ಟ್, ದೇಗುಲಗಳಿಗೆ ಭಂಪರ್ ಗಿಫ್ಟ್: 143 ಕೋಟಿ ಅನುದಾನ ಬಿಡುಗಡೆ