ಶಿವಮೊಗ್ಗ : ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಚೂರಿ ಇರಿತ ನಡೆದ ಬೆನ್ನಲ್ಲೇ ಭದ್ರಾವತಿಯಲ್ಲೂ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿಶಾಸಕ ಬಿ.ಕೆ. ಸಂಗಮೇಶ್ ಮಾತನಾಡಿ ಮತ್ತೊಂದು ಟ್ವಿಸ್ಟ್ ತಿಳಿಸಿದ್ದಾರೆ.
ಭದ್ರಾವತಿಯಲ್ಲಿ ಯಾವುದೇ ಕೋಮುಗಲಾಭೆ ನಡೆದಿಲ್ಲ. ಭಜರಂಗ ಕಾರ್ಯಕರ್ತ ಸುನೀಲ್- ಮುಬಾರಕ್ ಇಬ್ಬರು ಸ್ನೇಹಿತರೇ ಆಗಿದ್ದಾರೆ. ಇಬ್ಬರು ಒಟ್ಟಿಗೆ ಕುಳಿತು ಜೂಜಾಟ ಆಡುತ್ತಾರೆ . ಈಗ ವೈಯಕ್ತಿಕ ವಿಷಯಕ್ಕೆ ಗಲಾಟೆ ನಡೆದಿದೆ. ಹೊರತು ಕೋಮು ವಿಷಯಕ್ಕಲ್ಲ ಚುನಾವಣೆ ವರ್ಷದಲ್ಲಿ ಆಶಾಂತಿ ಸೃಷ್ಠಿಸುತ್ತಿದ್ದಾರೆ. ಎಂದು ಶಾಸಕ ಬಿ.ಕೆ. ಸಂಗಮೇಶ್ ಹೇಳಿಕೆ ನೀಡಿದ್ದಾರೆ.