ನ್ಯೂಯಾರ್ಕ್: ಪ್ರಾಣಿಗಳು ಸಹ ಮಂಕಿಪಾಕ್ಸ್(Monkeypox) ವೈರಸ್ಗೆ ತುತ್ತಾಗುವ ಅಪಾಯವಿದೆ. ಹೀಗಾಗಿ, ಮಂಕಿಪಾಕ್ಸ್ ಸೋಂಕಿಗೆ ಒಳಗಾದ ಜನರು ಮನೆಯ ಸಾಕುಪ್ರಾಣಿಗಳಿಂದ ದೂರವಿರಲು ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದ ತಿಂಗಳಿನಿಂದ ಯುಎಸ್ನಲ್ಲಿ ಮಂಕಿಪಾಕ್ಸ್ ಹರಡುತ್ತಿದ್ದಂತೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಕೆಲ ಸಲಹೆಗಳನ್ನು ಹೊರಡಿಸಿದೆ. ಇದರ ಬೆನ್ನಲ್ಲೇ, ಫ್ರಾನ್ಸ್ನಲ್ಲಿ ನಾಯಿಯಲ್ಲಿ ವೈರಸ್ ಪತ್ತೆಯಾದ ಬಗ್ಗೆ ವರದಿಯಾಗಿದೆ.
ಫ್ರಾನ್ಸ್ ಕಳೆದ ವಾರ ಪ್ರಕಟಗೊಂಡ ವೈದ್ಯಕೀಯ ಜರ್ನಲ್ನಲ್ಲಿ, ಮಂಕಿಪಾಕ್ಸ್ ಸೋಂಕಿತ ದಂಪತಿಗಳಿಬ್ಬರು ತಮ್ಮ ಸಾಕು ನಾಯಿಯೊಂದಿಗೆ ಇದ್ದರು. ಇವರ ಸಂಪರ್ಕಕ್ಕೆ ಬಂದ ನಾಯಿಗೂ ಕೂಡ ವೈರಸ್ ಹರಡಿದೆ ಎಂದು ವರದಿ ತಿಳಿಸಿದೆ.
ಈ ಹಿಂದೆ ಕಾಡು ಪ್ರಾಣಿಗಳಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿವೆ. ಇದು ವೈರಸ್ ಅನ್ನು ಮನುಷ್ಯರಿಗೆ ಹರಡುತ್ತದೆ. ಆದರೆ, ನಾಯಿ ಅಥವಾ ಬೆಕ್ಕಿನಂತಹ ಸಾಕುಪ್ರಾಣಿಗಳಲ್ಲಿ ಮಂಕಿಪಾಕ್ಸ್ ಸೋಂಕಿನ ಮೊದಲ ವರದಿ ಇದಾಗಿದೆ.
ಮಂಕಿಪಾಕ್ಸ್ ರೋಗಲಕ್ಷಣ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕಕ್ಕೆ ಬರುವ ಸಾಕುಪ್ರಾಣಿಗಳನ್ನು 21 ದಿನಗಳವರೆಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಬೇಕು ಎಂದು CDC ಸಲಹೆ ನೀಡಿದೆ.
‘ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಪಿಎಲ್ಸಿ’ಯನ್ನು ಖರೀದಿ – ಎಲೋನ್ ಮಸ್ಕ್
BIG NEWS: ಸರ್ಕಾರದ ಸಹಾಯಧನ, ಇತರೆ ಸೌಲಭ್ಯ ಪಡೆಯಲು ‘ಆಧಾರ್ ಸಂಖ್ಯೆ’ ಕಡ್ಡಾಯ – UIDAI ಆದೇಶ