ಜೆಬಾಲಿಯಾ (ಗಾಜಾ ಸ್ಟ್ರಿಪ್): ಪ್ಯಾಲೆಸ್ತೀನ್ನ ಗಾಜಾ ಮೇಲೆ ಇತ್ತೀಚೆಗೆ ನಡೆದ ಇಸ್ರೇಲಿ ವೈಮಾನಿಕ ದಾಳಿಗೆ ಐವರು ಮಕ್ಕಳು ಬಲಿಯಾಗಿದ್ದರೆ ಎಂದು ಮಾನವ ಹಕ್ಕುಗಳ ಗುಂಪು ಮತ್ತು ಇಸ್ರೇಲಿ ಪತ್ರಿಕೆಯು ಮಂಗಳವಾರ ವರದಿ ಮಾಡಿದೆ.
ಆದ್ರೆ, ಈ ಆರೋಪವನ್ನು ಇಸ್ರೇಲ್ ಮಿಲಿಟರಿ ತಳ್ಳಿಹಾಕಿದೆ. ಇದು ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಗುಂಪು ತಪ್ಪಾಗಿ ಹಾರಿಸಿದ ರಾಕೆಟ್ಗಳಿಂದ ಉಂಟಾಗಿರಬಹುದು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಈ ಘಟನೆಯಲ್ಲಿ 4 ರಿಂದ 16 ವರ್ಷ ವಯಸ್ಸಿನ ಐದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಅಸೋಸಿಯೇಟೆಡ್ ಪ್ರೆಸ್ ಭೇಟಿ ನೀಡಿ ಪರಿಶೀಲಿಸಿದೆ. ಈ ವೇಳೆ ಇಸ್ರೇಲಿ ರಾಕೆಟ್ನಿಂದಲೇ ವೈಮಾನಿಕ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇಸ್ರೇಲಿ ಮಿಲಿಟರಿ ಮತ್ತು ಪ್ಯಾಲೇಸ್ಟಿನಿಯನ್ ಹಕ್ಕುಗಳ ಗುಂಪುಗಳೆರಡೂ ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿತ್ತು. ಇದೀಗ, ಗಾಜಾ ಮೂಲದ ಪ್ಯಾಲೇಸ್ಟಿನಿಯನ್ ಮಾನವ ಹಕ್ಕುಗಳ ಕೇಂದ್ರವು ಪುರಾವೆಗಳನ್ನಾಧರಿಸಿ ಇಸ್ರೇಲಿ ವೈಮಾನಿಕ ದಾಳಿಯಿಂದ ಸ್ಫೋಟ ಸಂಭವಿಸಿದೆ ಎಂದು ಮಂಗಳವಾರ ತೀರ್ಮಾನಿಸಿದೆ.
ಏತನ್ಮಧ್ಯೆ, ಇಸ್ರೇಲ್ನ ಹಾರೆಟ್ಜ್ ಪತ್ರಿಕೆಯು ಹೆಸರಿಸದ ಇಸ್ರೇಲಿ ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ, ಇಸ್ರೇಲಿ ದಾಳಿಯಿಂದಲೇ ಐವರು ಮಕ್ಕಳು ಕೊಲ್ಲಲ್ಪಟ್ಟರು ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ವರದಿ ಮಾಡಿದೆ. ಇನ್ನೂ, ದಾಳಿ ಖಂಡಿಸಿ ಮೃತರ ಕುಟುಂಬಸ್ಥರು ಧರಣಿ ನಡೆಸಿದ್ದಾರೆ.
ಆ.15ರಂದು ಹೊಸ ದಾಖಲೆ ಬರೆದ ನಮ್ಮ ಮೆಟ್ರೋ: ಒಂದೇ ದಿನ 8.25 ಲಕ್ಷ ಮಂದಿ ಪ್ರಯಾಣ
ಪಾಕಿಸ್ತಾನದ ಸಿಂಧ್ನಲ್ಲಿ ಬಸ್-ಟ್ಯಾಂಕರ್ ನಡುವೆ ಡಿಕ್ಕಿ: 20 ಸಾವು, 6 ಮಂದಿಗೆ ಗಾಯ