ಬೆಂಗಳೂರು : ಸಾಂವಿಧಾನಿಕ ಹುದ್ದೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಸಿಎಂ ಬೊಮ್ಮಾಯಿ ವಿರುದ್ಧ ರಾಜ್ಯಪಾಲ ಗೆಹ್ಲೋಟ್ಗೆ ದೂರು ನೀಡಲಾಗಿದೆ.
BIGG NEWS: ಭಾರತದ ಕುರಿತು ಭವಿಷ್ಯ ಹೇಳಿ ಆತಂಕ ಸೃಷ್ಟಿಸಿದ ಬಾಬಾ ವಂಗಾ!
ನಿನ್ನೆ ಸಿಎಂ ಬೊಮ್ಮಾಯಿ “ಆರ್ಎಸ್ಎಸ್ಗೆ ತಲೆಬಾಗಿರುವೆ” ಎನ್ನುವ ಹೇಳಿಕೆ ನೀಡಿದ್ದರು. ಸಧ್ಯ ಈ ಹೇಳಿಕೆಯಿಂದ ಸಾಂವಿಧಾನಿಕ ಹುದ್ದೆಗೆ ಸಿಎಂ ಅಪಮಾನ ಮಾಡಿದ್ದಾರೆ ಎಂದು ಆರೋಪಿಲಾಗಿದೆ. ಅದ್ರಂತೆ, ಸಿಎಂ ಬೊಮ್ಮಾಯಿ ವಿರುದ್ಧ ರಾಜ್ಯಪಾಲ ಗೆಹ್ಲೋಟ್ಗೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ಹನುಮೇಗೌಡ ಅಸಂವಿಧಾನಿಕ ಸಂಘಟನೆಗೆ ಬದ್ಧರಾಗಿರುವ ಸಿಎಂ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇನ್ನು “ಆರ್ಎಸ್ಎಸ್ ಸಂಘಟನೆ ಕಾನೂನಿನಡಿ ನೋಂದಾಣಿಯಾಗಿಲ್ಲ. ಹಲವಾರು ಕೋಟಿ ವ್ಯವಹಾರವಿದ್ದರೂ ಲೆಕ್ಕಪತ್ರ ನಿರ್ವಹಿಸಿಲ್ಲ. ಇನ್ನು ಆರ್ಎಸ್ಎಸ್ ಸಂಘಟನೆ ಸರಿಯಾಗಿ ಸದಸ್ಯರ ನಿರ್ವಹಣೆ ಮಾಡಿಲ್ಲ. ಆರ್ಎಸ್ಎಸ್ ವಿರುದ್ಧ ಖುದ್ದು ಸಿಎಂಗೆ ದೂರು ನೀಡಿದ್ದರೂ ತನಿಖೆ ನಡೆಸಿಲ್ಲ. ಹಾಗಾಗಿ ಕ್ರಮಕೈಗೊಳ್ಳಿ” ಎಂದು ಆಗ್ರಹಿಸಿದ್ದಾರೆ.
ಅಂದ್ಹಾಗೆ, ನಿನ್ನೆ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ “ಆರ್ಎಸ್ಎಸ್ಗೆ ತಲೆಬಾಗಿರುವೆ” ಎನ್ನುವ ಹೇಳಿಕೆ ನೀಡಿದ್ದರು.