ಕೆಎನ್ ಎನ್ ನ್ಯೂಸ್ ಡೆಸ್ಕ್ : ನಾವು ಆರೋಗ್ಯದಿಂದ ಇರಬೇಕು ಅಂದರೆ ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ 5 ಲೀಟರ್ ನೀರು ಕುಡಿದರೆ ಆರೋಗ್ಯವಾಗಿರಬಹುದು ತಜ್ಞರು ಸಲಹೆ ನೀಡುತ್ತಾರೆ.
BIGG NEWS: ಅಮುಲ್, ಮದರ್ ಡೈರಿ ಹಾಲಿನ ಬೆಲೆ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ
ತಜ್ಞರ ಪ್ರಕಾರ, ಪ್ರತಿಯೊಬ್ಬರು ಕಡಿಮೆ ನೀರು ಕುಡಿದರೆ ದೇಹಕ್ಕೆ ಸಮಸ್ಯೆ, ಅದೇ ರೀತಿ ಹೆಚ್ಚು ಕುಡಿದರೆ ಅಪಾಯ ಎಂದು ಅವರು ಹೇಳುತ್ತಾರೆ. ಕುಡಿಯುವ ನೀರಿನ ಪ್ರಯೋಜನಗಳಿದ್ದರೂ, ಹೆಚ್ಚು ಕುಡಿಯುವುದರಿಂದ ಅಪಾಯವೂ ಇದೆ. ಅತಿಯಾದ ನೀರು ಕುಡಿಯುವುದರಿಂದ ಕೆಲವೊಮ್ಮೆ ದೇಹಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ.
ವಯಸ್ಕರು ದಿನಕ್ಕೆ 8 ರಿಂದ 12 ಗ್ಲಾಸ್ ನೀರು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಎಂಟು ಲೋಟ ನೀರು ಎರಡು ಲೀಟರ್ ನೀರಿಗೆ ಸಮ. ಬೇಸಿಗೆಯಲ್ಲಿ ಇದರ ಗಾತ್ರ ಹೆಚ್ಚಾಗುತ್ತದೆ. ಆದರೆ 3 ಲೀಟರ್ ಗಿಂತ ಹೆಚ್ಚು ನೀರು ಕುಡಿಯುವುದರಿಂದ ಲಿವರ್ ಸಮಸ್ಯೆ ಉಂಟಾಗುತ್ತದೆ.
BIGG NEWS: ಅಮುಲ್, ಮದರ್ ಡೈರಿ ಹಾಲಿನ ಬೆಲೆ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ
ಇದೀಗ ಜಾಸ್ತಿ ನೀರು ಕುಡಿಯುವುದರಿಂದ ಕೆಲವು ತೊಂದರೆಗಳು ಉಂಟಾಗಬಹುದು. ಹೆಚ್ಚು ನೀರು ಕುಡಿಯುವುದು ರಕ್ತದಲ್ಲಿನ ಸೋಡಿಯಂ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
*ವಾಕರಿಕೆ, ವಿಪರೀತ ಆಯಾಸ, ಅತಿಯಾದ ಮೂತ್ರ ವಿಸರ್ಜನೆ, ತಲೆನೋವು ಜತೆಗೆ ನಿದ್ರೆಗೆ ಭಂಗ ತರುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಇದರಿಂದ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಹೃದಯಾಘಾತದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
*ಹೆಚ್ಚುವರಿ ನೀರು ಜೀವಕೋಶಗಳು ಊದಿಕೊಳ್ಳಲು ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಇದರಿಂದ ಬ್ರೈನ್ ಸ್ಟ್ರೋಕ್ ಬರಬಹುದು ಎನ್ನುತ್ತಾರೆ.
*ದಿನದಲ್ಲಿ ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯಬೇಕಾದವರು ಅಥವಾ ದಿನಕ್ಕೆ 7 ರಿಂದ 10 ಗಂಟೆಗಳ ಕಾಲ ಎಸಿ ನಡುವೆ ಇರುವವರು ದಿನಕ್ಕೆ 8 ಲೋಟ ನೀರು ಕುಡಿಯಬೇಕು.