ಕಲಬುರ್ಗಿ : ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಅವರು ವಿವಾದಾತ್ಮಕ ಹೇಳಿಕೆ ನೀಡಿರುವುದನ್ನ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ತೀವ್ರ ಖಂಡಿಸಿದ್ದಾರೆ.ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ಅಕ್ಕ- ತಂಗಿಯರು ಮಂಚ ಹತ್ತಿ ಸರ್ಕಾರಿ ನೌಕರಿಗೆ ಹೋಗಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅವರು ಇಂತಹ ಹೇಳಿಕೆ ನೀಡಿರುವುದು ಶೋಭೆ ತರುವುದಿಲ್ಲ. ಲಂಚದ ಬಗ್ಗೆ ಮಾತನಾಡುತ್ತಾರೆ ಸರಿ, ಆದರೆ ಮಂಚದ ಬಗ್ಗೆ ಮಾತನಾಡಿ ರಾಜ್ಯದ ಮಹಿಳೆಯರ ಗೌರವ ತೆಗೆಯುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಸಹ ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದರು. ಅವರ ಮನೆಯಲ್ಲೂ ಸಹ ಅಕ್ಕ-ತಂಗಿಯರು ಇದ್ದಾರೆ. ಅವರು ಕೂಡ ಮಂಚ ಹತ್ತಿ ನೌಕರಿಗೆ ಹೋಗಿದ್ದಾರಾ? ಮಾತಾಡಬೇಕಾದರೆ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಕಿಡಿಕಾರಿದ್ದಾರೆ.