ಜೈಪುರ(ರಾಜಸ್ಥಾನ): ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಂದ ಮನನೊಂದಿರುವ ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘವಾಲ್ ಅವರು ಸೋಮವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು, ʻತಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಶಾಸಕರಾಗಿ ಉಳಿಯುವ ಹಕ್ಕಿಲ್ಲʼ ಎಂದು ಹೇಳಿದ್ದಾರೆ.
ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಜಾಲೋರ್ನಲ್ಲಿ ಶಾಲಾ ಶಿಕ್ಷಕರಿಂದ ಥಳಿಸಲ್ಪಟ್ಟ ದಲಿತ ಬಾಲಕನ ಸಾವಿನ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
“ನಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ನಾವು ವಿಫಲವಾದಾಗ, ಹುದ್ದೆಯಲ್ಲಿ ಉಳಿಯಲು ನಮಗೆ ಹಕ್ಕಿಲ್ಲ. ನನ್ನ ಆಂತರಿಕ ಧ್ವನಿಯನ್ನು ಆಲಿಸಿದ ನಂತರ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇದರಿಂದ ನಾನು ಯಾವುದೇ ಸ್ಥಾನವಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತೇನೆ” ಎಂದು ಮೇಘವಾಲ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರೂ ದಲಿತರು ಮತ್ತು ಇತರ ವಂಚಿತ ವರ್ಗಗಳ ಮೇಲಿನ ದೌರ್ಜನ್ಯಗಳು ಮುಂದುವರಿದಿವೆ.
ಇದರಿಂದ ನನಗೆ ನೋವಾಗಿದೆ. ನನ್ನ ಸಮುದಾಯವನ್ನು ಹಿಂಸಿಸುತ್ತಿರುವ ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಕುಡಿಯುವ ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕೆ ಶಿಕ್ಷಕ ಚೈಲ್ ಸಿಂಗ್ ಎಂಬಾತ 9 ವರ್ಷದ ಇಂದ್ರ ಕುಮಾರ್ ಜುಲೈ 20 ರಂದು ಶಾಲೆಯಲ್ಲಿ ಥಳಿಸಿದ್ದನು. ನಂತ್ರ, ಬಾಲಕನನ್ನು ಚಿಕಿತ್ಸೆಗಾಗಿ ಗುಜರಾತ್ನ ಅಹಮದಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಾವನ್ನಪ್ಪಿದ್ದಾನೆ.
ಇದೀಗ ಆರೋಪಿ ಶಿಕ್ಷಕ ಚೈಲ್ ಸಿಂಗ್ (40)ನನ್ನು ಬಂಧಿಸಲಾಗಿದ್ದು, ಸಂತ್ರಸ್ತನ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಿಸಿದೆ.
ಉತ್ತರ ಪ್ರದೇಶದಲ್ಲಿ ಮನೆಗೆ ನುಗ್ಗಿದ ಟ್ರಕ್: ನಿವೃತ್ತ ಎಸ್ಐ ಸೇರಿ ನಾಲ್ಕು ಮಂದಿ ಸಾವು, ಐವರಿಗೆ ಗಾಯ
ಕಳಪೆ ಗುಣಮಟ್ಟದ ಆಹಾರ ವಿತರಣೆ ಆರೋಪ: ಕೇಟರಿಂಗ್ ಮ್ಯಾನೇಜರ್ಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಶಾಸಕ… Video Viral