ಮುಂಬೈ : ವಸ್ತ್ರವಿನ್ಯಾಸಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಖ್ಯಾತ ಬಾಲಿವುಡ್ ಗಾಯಕ ಮತ್ತು ಸಂಯೋಜಕ ರಾಹುಲ್ ಜೈನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ತನ್ನ ನಿವಾಸದಲ್ಲಿ 30 ವರ್ಷದ ವಸ್ತ್ರವಿನ್ಯಾಸಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಈ ಗಾಯಕನ ಮೇಲಿದ್ದು, ಮುಂಬೈ ಪೊಲೀಸರು ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿದ್ದಾರೆ. ಈ ಮೂಲಕ ಗಾಯಕ ಕಾನೂನು ತೊಂದರೆಗೆ ಸಿಲುಕಿದ್ದಾರೆ. ಆದಾಗ್ಯೂ, ರಾಹುಲ್ ತಮ್ಮ ಮೇಲಿನ ಆರೋಪಗಳನ್ನ ನಿರಾಕರಿಸಿದ್ದು, ಇದೆಲ್ಲಾ ಸುಳ್ಳು ಎಂದಿದ್ದಾರೆ.
ಒಶಿವಾರಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಹೇಳಿಕೆಯಲ್ಲಿ, ರಾಹುಲ್ ಇನ್ಸ್ಟಾಗ್ರಾಮ್ನಲ್ಲಿ ತನ್ನನ್ನು ಸಂಪರ್ಕಿಸಿದ್ದು, ಅವರ ಕೆಲಸವನ್ನ ಶ್ಲಾಘಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ನಂತ್ರ ಅವರು ಉಪನಗರ ಅಂಧೇರಿ ಪ್ರದೇಶದ ಎತ್ತರದ ಕಟ್ಟಡದಲ್ಲಿರುವ ತನ್ನ ಫ್ಲ್ಯಾಟ್ʼಗೆ ಭೇಟಿ ನೀಡುವಂತೆ ಕೇಳಿದರು. ದೂರುದಾರರ ಪ್ರಕಾರ, ಗಾಯಕ ತನ್ನ ವೈಯಕ್ತಿಕ ವಸ್ತ್ರವಿನ್ಯಾಸಕನಾಗಿ ನೇಮಕಗೊಳ್ಳುವುದಾಗಿ ಭರವಸೆ ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅದ್ರಂತೆ, ಆಗಸ್ಟ್ 11 ರಂದು ಮಹಿಳೆ ರಾಹುಲ್ ಜೈನ್ ಫ್ಲ್ಯಾಟ್ಗೆ ಭೇಟಿ ನೀಡಿದ್ದು, ಗಾಯಕ ತನ್ನ ವಸ್ತುಗಳನ್ನ ತೋರಿಸುವ ನೆಪದಲ್ಲಿ ತನ್ನೊಂದಿಗೆ ತನ್ನ ಮಲಗುವ ಕೋಣೆಗೆ ಬರುವಂತೆ ಹೇಳಿ ನಂತ್ರ ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಹಿಳೆ ಫ್ರೀಲಾನ್ಸರ್ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಾಳೆ ಎಂದು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ.