ನವದೆಹಲಿ : ಭಾರತದ 76ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗಳು ತ್ರಿವರ್ಣ ಧ್ವಜವನ್ನ ಹಾರಿಸುವುದು, ಲೈಟ್ ಶೋ ಮತ್ತು ಫ್ಲ್ಯಾಶ್ ಮಾಬ್ಗಳಿಂದ ಹಿಡಿದು ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗ್ತಿದೆ. ಆದಾಗ್ಯೂ, ಐಐಟಿ ಬಾಂಬೆ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ ಸ್ವಲ್ಪ ವಿಭಿನ್ನ ವಿಧಾನವನ್ನ ಅನುಸರಿಸುವ ಭರದಲ್ಲಿ ಆಗಸ್ಟ್ 8ರಂದು ತನ್ನ ಕಟ್ಟಡದ ಫೋಟೋವನ್ನ ಫೇಸ್ಬುಕ್ನಲ್ಲಿ ಹಂಚಿಕೊಂಡಿದೆ. ವಿಪರ್ಯಾಸ ಅಮದ್ರೆ, ಈ ಕಟ್ಟಡದ ಮೇಲ್ಭಾಗದಲ್ಲಿ ಸ್ಪಷ್ಟವಾಗಿ ಎಡಿಟ್ ಮಾಡಿದ ಧ್ವಜವನ್ನ ಹಾರಿಸಲಾಗಿದೆ. ಇನ್ನಿದನ್ನ ಸಂಸ್ಥೆಯ ಫೇಸ್ಬುಕ್ ಪೇಜ್ನ ಮುಖಪುಟವಾಗಿ ಹೊಂದಿಸಲಾಗಿದೆ. ಸಧ್ಯ ಇದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
https://www.facebook.com/iitbombay/photos/a.624969190861218/5690410544317032/?type=3
“ನೀವು ನಿಮ್ಮ ಕವರ್ ಫೋಟೋದಲ್ಲಿ ರಾಷ್ಟ್ರಧ್ವಜವನ್ನ ಹಾಕದಿದ್ದರೆ ಅದು ಒಳ್ಳೆಯದಿತ್ತು. ಆದ್ರೆ, ನೀವು ದೇಶಭಕ್ತಿ ಎಂದು ತೋರಿಸಲು ಈ ಎಡಿಟ್ ಮಾಡಿದ ಫೋಟೋ ನಿಜವಾಗಿಯೂ ಬೋಗಸ್ ಆಗಿದೆ. ನನ್ನ ವಿಶ್ವವಿದ್ಯಾಲಯದಿಂದ ಇದನ್ನ ನೋಡಲು ದುಃಖವಾಗಿದೆ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನು ಇನ್ನೊಬ್ಬರು ಬಳಕೆದಾರ “ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆ ನಮ್ಮ ರಾಷ್ಟ್ರಧ್ವಜವನ್ನು ಏಕೆ ಫೋಟೋಶಾಪ್ ಮಾಡಬೇಕು?” ಎಂದರೇ, ಮತ್ತೊಬ್ಬರು “ಆರಾಮವಾಗಿರಿ, ಮುಂಬೈನಲ್ಲಿ ಈಗ ಭೂಮಿ ಬೆಲೆ ಎಷ್ಟು ದುಬಾರಿಯಾಗಿದೆ ಎಂದು ಎಲ್ಲರಿಗೂ ತಿಳಿದಿದೆ, ಅವರು ಧ್ವಜಕ್ಕಾಗಿ ಸ್ಥಳ / ಭೂಮಿಯನ್ನ ಖರೀದಿಸಲು ಸಾಧ್ಯವಾಗಿಲ್ಲ” ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನು ಮತ್ತೊಬ್ಬರು ಸ್ನ್ಯಾಪ್ ಚಾಟ್ ಫಿಲ್ಟರ್ ಬಳಸಿ ಧ್ವಜವನ್ನ ತಯಾರಿಸಲಾಗಿದೆಯೇ? ಎಂದು ಕೇಳಿದ್ದಾರೆ.