ನವದೆಹಲಿ : ಸುದೀರ್ಘ ಪ್ರಚಾರದ ನಂತ್ರ ಅಂತಿಮವಾಗಿ ಓಲಾ ಎಲೆಕ್ಟ್ರಿಕ್ ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ ಮೊದಲ ಎಲೆಕ್ಟ್ರಿಕ್ ಕಾರನ್ನ ಬಿಡುಗಡೆ ಮಾಡಿದೆ. ಮೊದಲ ನೋಟದಲ್ಲಿ, ಈ ಕಾರು ತುಂಬಾ ಸುಂದರವಾಗಿ ಕಾಣುತ್ತದೆ. ಕಾರಿನ ವಿನ್ಯಾಸವು ವಿಶಿಷ್ಟವಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಓಡಲಿದೆ ಎಂದು ಹೇಳಲಾಗಿದೆ. ಓಲಾ ಸಿಇಒ ಭವಿಶ್ ಅಗರ್ವಾಲ್ ಈ ವರ್ಷದ ಜನವರಿ 25ರಂದು ಈ ಎಲೆಕ್ಟ್ರಿಕ್ ಕಾರಿನ ಟೀಸರ್ ಟ್ವೀಟ್ ಮೂಲಕ ಬಿಡುಗಡೆ ಮಾಡಿದರು. ಈ ಹಿಂದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳನ್ನ ಬಿಡುಗಡೆ ಮಾಡಿತ್ತು ಮತ್ತು ಈಗ ಓಲಾ ಎಲೆಕ್ಟ್ರಿಕ್ ಕಾರುಗಳ ವಿಭಾಗಕ್ಕೆ ಕಾಲಿಟ್ಟಿದೆ.
“ಈ ನವ ಭಾರತವನ್ನು ವ್ಯಾಖ್ಯಾನಿಸುವ ಕಾರಿಗೆ ನಾವು ಅರ್ಹರಾಗಿದ್ದೇವೆ. ನಿರ್ಭೀತಿಯುಳ್ಳ ಮತ್ತು ತನ್ನದೇ ಆದ ಹಣೆಬರಹವನ್ನ ಬರೆಯುವುದರಲ್ಲಿ ಭಾರತ ನಂಬಿಕೆಯಿಟ್ಟಿದೆ. ನಮ್ಮ ಕಾರು ಭಾರತದ ಅತ್ಯಂತ ವೇಗದ ಕಾರುಗಳಲ್ಲಿ ಒಂದಾಗಲಿದ್ದು, 4 ಸೆಕೆಂಡುಗಳಲ್ಲಿ 0 ರಿಂದ 100ರ ವೇಗ ಹೊಂದಿದೆ. ಇದು ಪ್ರತಿ ಚಾರ್ಜ್ʼಗೆ 500 ಕಿಲೋಮೀಟರ್ʼಗಿಂತ ಹೆಚ್ಚು ವ್ಯಾಪ್ತಿಯನ್ನ ಹೊಂದಿರುತ್ತದೆ” ಎಂದು ಓಲಾ ಎಲೆಕ್ಟ್ರಿಕ್ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಹೇಳಿದರು.
ಇತರ EV ಗಳಿಗಿಂತ ಹೆಚ್ಚು ಉದ್ದವಾಗಿದೆ
ಈ ಕಾರು ಒಂದೇ ಚಾರ್ಜ್ನಲ್ಲಿ 500 ಕಿಮೀ ಓಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ, ಇದು ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಇತರ ಎಲೆಕ್ಟ್ರಿಕ್ ಕಾರುಗಳಿಗಿಂತ ಹೆಚ್ಚಾಗಿದೆ.
ಓಲಾ ಅವರದೇ ವೇದಿಕೆ
ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಓಲಾ ತನ್ನದೇ ಆದ ವೇದಿಕೆಯನ್ನ ಹೊಂದಿದೆ. ಈ ವೆಬ್ಸೈಟ್ನ ಹೆಸರು olaelectric.com. ಪ್ರಸ್ತುತ, ಈ ವೆಬ್ಸೈಟ್ನಲ್ಲಿ ಓಲಾದ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಖರೀದಿಸಲು ಅವಕಾಶವಿದ್ದು, ಕಂಪನಿಯು ಎಲ್ಲಾ ರೀತಿಯ ಸ್ಕೂಟರ್ಗಳು, ಅವುಗಳ ಬೆಲೆ, ಚಾರ್ಜ್ ಮಾಡಿದ ನಂತರ ಅವುಗಳ ಕಿಲೋಮೀಟರ್ ಶ್ರೇಣಿ ಮತ್ತು ಪಿಕಪ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ಶೀಘ್ರದಲ್ಲೇ ಈ ವೆಬ್ಸೈಟ್ನಲ್ಲಿ ಕಾರಿನ ಬಗ್ಗೆ ಎಲ್ಲಾ ಮಾಹಿತಿ ಲಭ್ಯವಾಗಲಿದೆ.
ಬಿಡುಗಡೆಯಾದ ನಂತರ, ಓಲಾದಿಂದ ಈ ಎಲೆಕ್ಟ್ರಿಕ್ ಕಾರು ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ, ಟಿಗೋರ್ ಇವಿ, ಎಂಜಿ ಝಡ್ಎಸ್ ಇವಿ, ಹ್ಯುಂಡೈ ಕೋನಾ ಎಲೆಕ್ಟ್ರಿಕ್ನಂತಹ ಕಾರುಗಳನ್ನ ಒಳಗೊಂಡಿರುವ ಭಾರತೀಯ ಮಾರುಕಟ್ಟೆಯ ಈ ವಿಭಾಗದಲ್ಲಿ ಕೆಲವು ಅತ್ಯುತ್ತಮ ಆಟಗಾರರೊಂದಿಗೆ ಸ್ಪರ್ಧಿಸುತ್ತದೆ.