ನವದೆಹಲಿ : ದೇಶದ 76 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೆಂಪುಕೋಟೆ ಮೇಲೆ ಸತತ 9 ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಳೆದ 2 ವರ್ಷದ ಸ್ವಾತಂತ್ರ್ಯ ದಿನಾಚರಣೆಗಳು ಕೋವಿಡ್ 19 ಸೋಂಕಿನ ಹಾವಳಿಯಿಂದ ಮಂಕಾಗಿದ್ದವು. ಈ ಬಾರಿ ಕೋವಿಡ್ ಅಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಸೇರಿ ಹಲವು ಅಭಿಯಾನಗಳನ್ನು ಸರ್ಕಾರ ಹಮ್ಮಿಕೊಂಡಿದೆ.
ಇಂದು ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ, ಹೀಲ್ ಇಂಡಿಯಾ ಹಾಗೂ ಹೀಲ್ ಬೈ ಇಂಡಿಯಾ ಎಂಬ 2 ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.
#WATCH Live via ANI FB: Prime Minister Narendra Modi addresses the nation from the ramparts of the Red Fort on #IndependenceDay
(Source: DD National)https://t.co/3mo97GWYr3 pic.twitter.com/IKMQzdA8Sg
— ANI (@ANI) August 15, 2022