ಕೋಲಾರ :ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷಗಳು ಪೂರೈಸಿರುವ ಹಿನ್ನೆಲೆ ದೇಶದಾಧ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ದೇಶದಲ್ಲೇ ಅತಿದೊಡ್ಡ ರಾಷ್ಟ್ರಧ್ವಜ ಅನಾವರಣಕ್ಕೆ ಭರದಿಂದ ಸಿದ್ಧತೆ ಮಾಡುತ್ತಿದೆ
ಸರ್ಕಾರ ನಡೀತಿಲ್ಲ, ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ : ಸಚಿವ ಮಾಧುಸ್ವಾಮಿ ವೈರಲ್ ಆಡಿಯೋ ಇಲ್ಲಿದೆ
ಬೃಹತ್ತಾದ ಗೋಡೋನ್ ನಲ್ಲಿ ನಿರ್ಮಾಣ ವಾಗುತ್ತಿರುವ ಬೃಹತ್ ತ್ರಿವರ್ಣ ಧ್ವಜ, ಅಂತಿಮ ಹಂತರದ ಸಿದ್ದತೆಗಳನ್ನು ವೀಕ್ಷಣೆ ಸಂಸದ ಮುನಿಸ್ವಾಮಿ ಮಾಡಿದ್ದಾರೆ. ಕೋಲಾರದಲ್ಲಿ ಮಾತ್ರ 75 ನೇ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಣೆ ಮಾಡಲು ನಿರ್ಧರಿಸಿರುವ ಸಂಸದ ಮುನಿಸ್ವಾಮಿ ಹಾಗೂ ಜಿಲ್ಲಾ ಬಿಜೆಪಿ ಸ್ವತಂತ್ರ್ಯ ದಿನಾಚರಣೆಯಂದು ದೇಶದಲ್ಲೇ ಅತಿದೊಡ್ಡದಾದ ತ್ರಿವರ್ಣಧ್ವಜವನ್ನು ಅನಾವರಣ ಮಾಡಲು ಸಿದ್ದತೆ ನಡೆಸಿದ್ದಾರೆ.
ಈ ಬೃಹತ್ ಧ್ವಜ ದೇಶದಲ್ಲೇ ಮೊದಲನೇ ಅತಿ ದೊಡ್ಡದಾದ ಧ್ವಜ ಎಂಬ ಹೆಗ್ಗಳಿಕೆ ಪಾತ್ರವಾಗಲಿದ್ದು, ಇದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೂ ಸೇರಿಸಲಾಗುತ್ತಿದೆ. ಇನ್ನು ಒಂದಲ್ಲ ಎರಡಲ್ಲಾ ಹತ್ತಾರು ವಿಶೇಷಗಳನ್ನು ಹೊಂದಿರುವ ಈ ಬೃಹತ್ ತ್ರಿವರ್ಣ ಧ್ವಜವನ್ನು 25 ಜನ ಕಾರ್ಮಿಕರು ಕಳೆದೊಂದು ವಾರದಿಂದ ಹಗಲು ರಾತ್ರಿ ಶ್ರಮವಹಿಸಿ ನಿರ್ಮಾಣ ಮಾಡಲಾಗಿದೆ.
ಇನ್ನು ಈ ಬೃಹತ್ ಧ್ವಜ ವಿಶೇಷ ಏನು ಅಂಥ ನೋಡೋದಾದ್ರೆ. ಈ ಬೃಹತ್ ಧ್ವಜ 204 ಅಡಿ ಉದ್ದ 630 ಅಡಿ ಅಗಲವಿದ್ದು ಒಟ್ಟು 1.30 ಲಕ್ಷ ಚದರಡಿ ವಿಸ್ತೀರ್ಣ ಹೊಂದಿದೆ. ಇನ್ನು ಧ್ವಜ ಮೇಲಿನ ಅಶೋಕ ಚಕ್ರ 60-60 ಅಂದರೆ 3400 ಚದರಡಿ ವಿಸ್ತೀರ್ಣ ಹೊಂದಿದೆ. ಇನ್ನು ಈ ಧ್ವಜ ನಿರ್ಮಾಣಕ್ಕಾಗಿ ಸುಮಾರು 13,000 ಮೀಟರ್ ಬಟ್ಟೆ ಬಳಸಲಾಗಿದೆ.
ಸರ್ಕಾರ ನಡೀತಿಲ್ಲ, ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ : ಸಚಿವ ಮಾಧುಸ್ವಾಮಿ ವೈರಲ್ ಆಡಿಯೋ ಇಲ್ಲಿದೆ
ಸುಮಾರು 3 ಟನ್ ನಷ್ಟ ತೂಕ ಹೊಂದಿರುವ ಈ ಧ್ವಜ ದೇಶದಲ್ಲೇ ಅತಿ ದೊಡ್ಡದಾದ ತ್ರಿವರ್ಣ ಧ್ವಜ ಎಂಬ ಹೆಗ್ಗಳಿಕೆ ಹೊಂದಿದೆ, ಅಷ್ಟೇ ಅಲ್ಲದೆ ಇದು ಕೈಯಿಂದ ನಿರ್ಮಾಣ ಮಾಡಲಾಗಿರುವ ರಾಷ್ಟ್ರಧ್ವಜ ಎಂಬ ಹೆಗ್ಗಳಿಕೆ ಕೂಡಾ ಇದಕ್ಕಿದೆ. ಹಾಗಾಗಿಯೇ ಇದನ್ನು ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೂ ಸೇರಿಸಲಾಗುತ್ತಿದೆ. ಆಗಸ್ಟ್-15 ರಂದು ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈ ಬೃಹತ್ ಧ್ವಜವನ್ನು ಅನಾವರಣ ಮಾಡಲು ಸಿದ್ದತೆ ಮಾಡಿದ್ದು, ಈ ಧ್ವಜ ಹಿಡಿದುಕೊಳ್ಳಲು 2000 ಜನರನ್ನು ನೇಮಿಸಲಾಗಿದೆ.
ಒಟ್ಟಾರೆ ಕೋಲಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಹಾಗೂ ವಿಶ್ವದ ಗಮನ ಸೆಳೆಯಲು ನಿರ್ಧಾರ ಮಾಡಿದ್ದು ಅಮೃತ ಮಹೋತ್ಸವ ಆಚರಣೆಯನ್ನು ಕೋಲಾರದ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತೆ ಬೃಹತ್ ಧ್ವಜ ಹಾರಿಸುವ ಮೂಲಕ ಕೋಲಾರ ಮತ್ತೊಂದು ದಾಖಲೆ ಬರೆಯೋದಂತು ಸುಳ್ಳಲ್ಲ.
ಸರ್ಕಾರ ನಡೀತಿಲ್ಲ, ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ : ಸಚಿವ ಮಾಧುಸ್ವಾಮಿ ವೈರಲ್ ಆಡಿಯೋ ಇಲ್ಲಿದೆ