ಬೆಂಗಳೂರು: ಸರ್ಕಾರ ನಡೀತಿಲ್ಲ, ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅನ್ನೋ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾಸ್ಕರ್: ನಮಸ್ತೆ ಸರ್, ನಾನು ಚನ್ನಪಟ್ಟಣದಿಂದ ಸಮಾಜ ಸೇವಕ ಭಾಸ್ಕರ್ ಅಂತ. ವಿಎಸ್ಎಸ್ಎನ್ ಬ್ಯಾಂಕ್ನಲ್ಲಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದಾರೆ ರೈತರು. ಅದಕ್ಕೆ ಕಟ್ಟಬೇಕಾದರೆ ರಿನೀವಲ್ಗೆ ಅಂತ 1,300 ರೂಪಾಯಿಯನ್ನ ಬ್ಯಾಂಕ್ ಸಿಬ್ಬಂದಿಗಳು ತಗೊಂಡು ಅವರೇ ಅವರೇ ಫುಲ್ ಹಣ ಕಟ್ಟಿಕೊಂಡು ಹಿಡಿಕೊಳ್ಳಲಾತ್ತಿದ್ದಾರೆ. ಇಡೀ ಕರ್ನಾಟಕದಲ್ಲಿ,
ಮಾಧುಸ್ವಾಮಿ? ಏನಪ್ಪ ಮಾಡ್ಲಿ… ಇದೆಲ್ಲ ನನಗೆ ಗೊತ್ತು, ಸನ್ಮಾನ್ಯ ಸೋಮಶೇಖರ್ ಅವರ ಗಮನಕ್ಕೂ ತಂದಿದ್ದೇನೆ. , ಬಡ್ಡಿ ಹೊಡ್ಕೊಂಡು ತಿಂತಾರೆ ಅಂತ, ಬಡ್ಡಿ ಕಟ್ಟಿಸಿಕೊರ್ಳಲಾತೆ. ಅವರೇನು ಕ್ರಮ ಜರುಗಿಸ್ತಾ ಇಲ್ವಲ್ಲಾ… ಏನ್ ಮಾಡೋದು?
ಭಾಸ್ಕರ್: ಮಂಗನಂತೆ ಮಾಡಿಬಿಟ್ಟಿದ್ದಾರೆ ರೈತರನ್ನ ಬ್ಯಾಂಕ್ನವರು ನೋಡಿ ಸರ್
ಮಾಧುಸ್ವಾಮಿ? : ನಾನೇ ಕಟ್ಟಿದ್ದೀನಿ ಮಾರಾಯಾ, ರೈತರಲ್ಲ ನನ್ನ ಅತ್ರನೂ ತಗೊಂಡವ್ರೇ…
ಭಾಸ್ಕರ್: ನೋಡಿ ಸರ್ ಇದೆಲ್ಲಾ ನೋಡೋಕೆ ರೀತಿ ಸರಿ ಕಾಣ್ತಾ ಇ ಲ್ಲ ಅಲ್ವಾ?
ಮಾಧುಸ್ವಾಮಿ? : ಸರ್ಕಾರ ನಡೀತಾ ಇಲ್ಲ ಇಲ್ಲಿ, ಮ್ಯಾನೇಜ್ಮೆಂಟ್ ಮಾಡ್ತಿದ್ದೀವಿ ಅಷ್ಟೆ. ಇನ್ನು 8 ತಿಂಗಳು ಅಂತ ತಳ್ತಾ ಇದ್ದೀವಿ…