ಬೆಂಗಳೂರು : ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪರಿಹಾರಕ್ಕೆ ಗಡುವು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಬರುವ ಅರ್ಜಿಗಳನ್ನು ಬಿಎಂಎಸ್ ತಂತ್ರಾಂಶದಲ್ಲಿ ನಮೂದಿಸಲು ಕಾಲಮಿತಿ ನಿಗಿದಿಪಡಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸೋಂಕಿನಿಂದ ಮೃತಪಟ್ಟ ಎಲ್ಲ ವ್ಯಕ್ತಿಗಳ ಕಾನೂನು ಬದ್ಧವಾರಸುದಾರರಿಗೆ ಕೇಂದ್ರ ಸರ್ಕಾರದ ಎಸ್ ಡಿಆರ್ ಎಫ್ ಮಾರ್ಗಸೂಚಿ ಅನ್ವಯ 50 ಸಾವಿರ ರೂ. ಪರಿಹರ ಧನ ವಿತರಿಸಲಾಗುತ್ತದೆ.
2022 ರ ಮೇ 15 ಕ್ಕಿಂತ ಮೊದಲು ಮೃತಪಟ್ಟ ವ್ಯಕ್ತಿಗಳ ಪ್ರಕರಣದಲ್ಲಿ ಪರಿಹಾರ ಕೋರಿ ಬರುವ ಅರ್ಜಿಗಳನ್ನು ಬಿಎಂಎಸ್ ತಂತ್ರಾಂಶದಲ್ಲಿ ನಮೂದಿಸಲು ನಿಗದಿಪಡಿಸಿದ ಕಾಲ ಮಿತಿಯನ್ನು ಆಗಸ್ಟ್ 16ರಿಂದ ಆಗಸ್ಟ್ 23 ರವರೆಗೆ ವಿಸ್ತರಿಸಲಾಗಿದೆ.
BIGG NEWS : ಬೆಂಗಳೂರಿನಲ್ಲಿ ʼಟಿಪ್ಪು ಸುಲ್ತಾನ್ ಫೆಕ್ಸ್ʼ ಹರಿದುಹಾಕಿದ ಕಿಡಿಗೇಡಿಗಳು : ಪೊಲೀಸರಿಂದ ಕಟ್ಟೆಚ್ಚರ