ಶಿವಮೊಗ್ಗ : ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಧ್ವಜದ ಬಣ್ಣ ಗೊತ್ತಿಲ್ಲ. ಕೆಂಪು, ಬಿಳಿ, ಹಸಿರು ಎಂದು ಹೇಳುವ ಪರಿಸ್ಥಿತಿ ಅವರದ್ದಾಗಿದೆ. ಧ್ವಜದ ಬಣ್ಣದ ಕುರಿತು ನೀಡಿದ ಹೇಳಿಕೆಗೆ ಅವರು ಬಹಿರಂಗ ಕ್ಷಮೆಯಾಚಿಸಬೇಕು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
BIGG NEWS : ಚುನಾವಣಾ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ಭಾರತ ದೇಶವನ್ನು ಎರಡು ಭಾಗ ಮಾಡಿದ್ದರು. ಹೀಗಾಗಿ ನೆಹರು ಸಂತತಿ ಅಂದರೆ ಅದು ಜಿನ್ನಾ ಸಂತತಿ ಇದ್ದಂತೆ. ಈಗ ಅದೇ ಸಂತತಿಗೆ ಸೇರಿದ ರಾಹುಲ್ ಗಾಂಧಿ ಅವರಿಂದ ದೇಶ ಜೋಡೋ ಪಾದಾಯಾತ್ರೆ ಮಾಡಲಾಗುತ್ತಿದೆ. ದೇಶ ತುಂಡು ಮಾಡಿದವರು ರಾಷ್ಟಭಕ್ತರೋ ಅಥವಾ ರಾಷ್ಟ್ರದ್ರೋಹಿಗಳೋ ಎಂದು ದೇಶದ ಜನ ತೀರ್ಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
BIGG BREAKING NEWS: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮತ್ತೆ ಕೋವಿಡ್ ಪಾಸಿಟಿವ್| Covid
ನಮಗೆ ರಾಷ್ಟ್ರಭಕ್ತಿ ಹೇಳಿಕೊಡುವ ಅವಶ್ಯಕತೆ ಕಾಂಗ್ರೆಸ್ ಗೆ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದವರಿಗೆ ತ್ರಿವರ್ಣ ಧ್ವಜದ ಬಗ್ಗೆ ಅಭ್ಯಾಸವರ್ಗ ಮಾಡಲಿ. ತ್ರಿವರ್ಣ ಧ್ವಜದ ಬಗ್ಗೆ ಈಗಿನ ಕಾಂಗ್ರೆಸ್ ನಾಯಕರಿಗೆ ಯಾವುದೇ ಕಲ್ಪನೆಯಿಲ್ಲ. ವಿಧಾನಸಭೆ ಬಾವಿಗಳಿದು ಪ್ರತಿಭಟನೆ ಮಾಡುವ ಸಂದರ್ಭದಲ್ಲೂ ಧ್ವಜ ಬಳಕೆ ಮಾಡಿದ್ದರು. ಆ ಮೂಲಕ ಕಾಂಗ್ರೆಸ್ ಪಕ್ಷ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದೆ ಎಂದು ಕಿಡಿಕಾರಿದ್ದಾರೆ.