ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಆನೆಕಾಡು ತೊಂಡೂರು ಬಳಿ ಕೆಎಸ್ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ ಹಲವರಿಗೆ ಗಂಭೀರ ಗಾಯವಾಗಿದೆ.
BIGG BREAKING NEWS: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮತ್ತೆ ಕೋವಿಡ್ ಪಾಸಿಟಿವ್| Covid
ಬೆಳಗ್ಗೆ ಬಸ್ ಹಾಸನದಿಂದ ಮಡಿಕೇರಿಗೆ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಒಂದು ಬದಿಗೆ ಬಸ್ಸು ವಾಲಿದೆ. ಇದರಿಂದಾಗಿ ಬಸ್ಸಿನೊಳಗಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಬಸ್ಸು ಒಂದು ಕಡೆ ವಾಲಿದ್ದರಿಂದ ಬಸ್ಸಿನ ತುರ್ತು ಬಾಗಿಲು ತೆರೆದು ಪೊಲೀಸರು ಜನರ ರಕ್ಷಣೆಯನ್ನು ಮಾಡಿದರು. ಈ ಘಟನೆಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.