ಮಡಿಕೇರಿ : ರಾಜ್ಯದಲ್ಲಿ ಕೋವಿಡ್-19 ಲಸಿಕಾಕರಣದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ ಕೋವಿಡ್-19 ಲಸಿಕೆಯನ್ನು ಒಂದನೇ ಮತ್ತು ಎರಡನೇ ವರಸೆಯಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸ್ ಅನ್ನು ನೀಡಲಾಗಿರುತ್ತದೆ.
BIGG NEWS : ದೇಶಾದ್ಯಂತ ಇಂದಿನಿಂದ `ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ
ಭಾರತ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಒಂದನೇ ಮತ್ತು ಎರಡನೇ ವರಸೆಯಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸ್ ಲಸಿಕೆಯನ್ನು ಪಡೆದುಕೊಂಡಿದ್ದರೂ ಮುಂಜಾಗ್ರತಾ ಲಸಿಕೆಯಲ್ಲಿ ಕೋರ್ಬೋವ್ಯಾಕ್ಸ್ ಲಸಿಕೆಯನ್ನು ಹಾಕಿಕೊಳ್ಳಬಹುದಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲವೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
BIGG NEWS : ‘ವೈದ್ಯಕೀಯ, ಎಂಜಿನಿಯರಿಂಗ್’ಗೆ ಒಂದೇ ಪರೀಕ್ಷೆ ; ‘UGC’ಯಿಂದ ‘ಹೊಸ ಯೋಜನೆ’ ಜಾರಿ |NEET JEE Merge
ಆದ್ದರಿಂದ ಎರಡನೇ ವರಸೆಯ ಲಸಿಕೆಯನ್ನು ಪಡೆದುಕೊಂಡು 6 ತಿಂಗಳು ಪೂರೈಸಿರುವ ಮುಂಜಾಗ್ರತಾ ಲಸಿಕೆಗೆ ಬಾಕಿ ಇರುವ ಎಲ್ಲಾ ಫಲಾನುಭವಿಗಳು ಮುಂಜಾಗ್ರತಾ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಲು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.