ಜೈಪುರ : ರಾಜಸ್ಥಾನದ ಸುಮಾರು ಒಂದು ಕೋಟಿ ಶಾಲಾ ವಿದ್ಯಾರ್ಥಿಗಳು ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅಭಿಯಾನದಡಿ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಈ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪ್ರತಿಷ್ಠಿತ ಸಂಸ್ಥೆಯಾದ ಲಂಡನ್ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ʻಒಂದು ಕೋಟಿ ವಿದ್ಯಾರ್ಥಿಗಳು ಹಾಡಿದ ಹಾಡುಗಳನ್ನು ಆಲಿಸಿ ರಾಜ್ಯ ಸರ್ಕಾರಕ್ಕೆ ಪ್ರಮಾಣಪತ್ರವನ್ನು ನೀಡಿರುವುದು ನನಗೆ ಸಂತೋಷವಾಗಿದೆʼ ಎಂದು ಅವರು ಹೇಳಿದರು.
‘ವಂದೇ ಮಾತರಂ’, ‘ಸಾರೆ ಜಹಾನ್ ಸೆ ಅಚಾ’ ಮತ್ತು ರಾಷ್ಟ್ರಗೀತೆಯಂತಹ ಹಾಡುಗಳನ್ನು ವಿದ್ಯಾರ್ಥಿಗಳು ಸುಮಾರು 25 ನಿಮಿಷಗಳ ಕಾಲ ಹಾಡಿ ದಾಖಲೆ ನಿರ್ಮಿಸಿದರು.
ಹೊಸ ಪೀಳಿಗೆಯು ಭ್ರಾತೃತ್ವ ಮತ್ತು ತ್ಯಾಗದ ಮೌಲ್ಯಗಳನ್ನು ಬೆಳೆಸಬೇಕು, ಏಕೆಂದರೆ ಅವು ದೇಶದ ಭವಿಷ್ಯ ಎಂದು ಮುಖ್ಯಮಂತ್ರಿ ಹೇಳಿದರು