ನವದೆಹಲಿ : ಈ ವರ್ಷದ ಐಐಟಿಗಳ ಪ್ರವೇಶಕ್ಕಾಗಿ ಜಂಟಿ ಪ್ರವೇಶ ಪರೀಕ್ಷೆ(JEE )-ಅಡ್ವಾನ್ಸ್ಡ್ʼಗೆ ನೋಂದಣಿಯ ಗಡುವನ್ನ ಶುಕ್ರವಾರ ರಾತ್ರಿ 8 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಐಐಟಿ ಬಾಂಬೆ ಪ್ರಕಟಿಸಿದೆ. ಆದಾಗ್ಯೂ, ಇದು ಅಂತಿಮ ಗಡುವಾಗಿದ್ದು, ಇದರ ನಂತರ ಯಾವುದೇ ವಿಸ್ತರಣೆ ಇರುವುದಿಲ್ಲ. ಅಂದ್ಹಾಗೆ, ಐಐಟಿ ಬಾಂಬೆ ಈ ವರ್ಷ ನಿರ್ಣಾಯಕ ಪರೀಕ್ಷೆಯನ್ನು ನಡೆಸುತ್ತಿದೆ.
“ಜೆಇಇ (ADV) ನೋಂದಣಿಯ ಗಡುವನ್ನ 2022ರ ಆಗಸ್ಟ್ 12ರಂದು ರಾತ್ರಿ 8:00 ರವರೆಗೆ ವಿಸ್ತರಿಸಲಾಗಿದೆ. ಇದು ಅಂತಿಮ ಗಡುವು, ಮತ್ತು ವಿದ್ಯಾರ್ಥಿಗಳು ಇಂದು ರಾತ್ರಿ 8:00 ರೊಳಗೆ https://jeeadv.nic.in ತಮ್ಮ ದಾಖಲೆಗಳು ಮತ್ತು ಪರೀಕ್ಷಾ ನಗರ ಕೇಂದ್ರದ ಆಯ್ಕೆಗಳನ್ನ ಅಪ್ಲೋಡ್ ಮಾಡಬೇಕು” ಎಂದು ಸಂಸ್ಥೆ ಹೇಳಿದೆ.
ಪರೀಕ್ಷೆಯ ನೋಂದಣಿ ಸೋಮವಾರದಿಂದ ಪ್ರಾರಂಭವಾಯಿತು ಮತ್ತು ಈ ಮೊದಲು ಆಗಸ್ಟ್ 11ರಂದು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಬೇಕಿತ್ತು.
ಪರೀಕ್ಷೆಯನ್ನು ಆಗಸ್ಟ್ 28ರಂದು ನಿಗದಿಪಡಿಸಲಾಗಿದೆ. ಜೆಇಇ-(ಮುಖ್ಯ) ನಿಂದ ಸುಮಾರು 2.62 ಲಕ್ಷ ಅಭ್ಯರ್ಥಿಗಳು ಜೆಇಇ-(ಅಡ್ವಾನ್ಸ್ಡ್) ಗೆ ಅರ್ಹತೆ ಪಡೆದಿದ್ದಾರೆ. ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು ಉತ್ತರ ಪ್ರದೇಶಕ್ಕೆ ಸೇರಿದ್ರೆ, ಮಹಾರಾಷ್ಟ್ರ ಮತ್ತು ತೆಲಂಗಾಣ ನಂತರದ ಸ್ಥಾನದಲ್ಲಿವೆ.