ಕಲಬುರಗಿ : ತಾಜ್ ಬಾಬಾ ಎಂದೇ ಖ್ಯಾತರಾಗಿದ್ದ ದೇಶದ ಮುಂಚೂಣಿ ಸೂಫಿ ಸಂತ ಹಝರತ್ ಶೇಖ್ ತಾಜುದ್ದೀನ್ ಜುನೈದಿ ಅನಾರೋಗ್ಯದಿಂದ ಇಂದು ಮುಂಜಾನೆ ಮೃತಟ್ಟಿದ್ದಾರೆ.
ದೇಶದ ಮುಂಚೂಣಿ ಸೂಫಿ ಸಂತ ಹಝರತ್ ಶೇಖ್ ತಾಜುದ್ದೀನ್ ಅಪಾರ ಅನುಯಾಯಿಗಳನ್ನು ಹೊಂದಿದ್ದರು. ಜುಮಾ ನಮಾಝ್ ಬಳಿಕ ಕಲಬುರಗಿಯ ಜುನೈದೇ ದರ್ಬಾರ್ನಲ್ಲಿ ದಫನ್ ಕಾರ್ಯ ನಡೆಯಲಿದೆ.
ತಾಜುದ್ದೀನ್ ಜುನೈದಿ ನಿಧನಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಅಧ್ಯಾತ್ಮ, ಶಿಕ್ಷಣ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಶ್ರೀಯುತರು, ಕಲಬುರಗಿಯಲ್ಲಿ ಹುಟ್ಟಿದರೂ, ಕೋಲಾರವನ್ನು ತಮ್ಮ ಸೇವಾನೆಲೆಯನ್ನಾಗಿ ಮಾಡಿಕೊಂಡಿದ್ದರು. ಹಝ್ರತ್ ಶೈಖ್ ತಾಜುದ್ದೀನ್ ಜುನೈದೀ ಅವರು ನಮ್ಮನ್ನಗಲಿರುವುದು ಅಪಾರ ದುಃಖ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿ ಅಧ್ಯಾತ್ಮ, ಶಿಕ್ಷಣ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದ, ಕಲಬುರಗಿಯಲ್ಲಿ ಹುಟ್ಟಿದರೂ, ಕೋಲಾರವನ್ನು ತಮ್ಮ ಸೇವಾನೆಲೆಯನ್ನಾಗಿ ಮಾಡಿಕೊಂಡಿದ್ದ ಶ್ರೀ ಹಝ್ರತ್ ಶೈಖ್ ತಾಜುದ್ದೀನ್ ಜುನೈದೀ ಅವರು ನಮ್ಮನ್ನಗಲಿರುವುದು ಅಪಾರ ದುಃಖ ಉಂಟು ಮಾಡಿದೆ. 1/2 pic.twitter.com/d0LkO7ybCL
— H D Kumaraswamy (@hd_kumaraswamy) August 12, 2022