ಕೆಎನ್ಎನ್ಡಿಜಿಟಲ್ ಡೆಸ್ಕ್ : ಆಗಸ್ಟ್ 27ರಿಂದ ಏಷ್ಯಾಕಪ್ ಪಂದ್ಯಾವಳಿಗಳು ನಡೆಯಲಿದ್ದು, ಈ ಬಾರಿಯೂ ಏಷ್ಯಾಕಪ್ ಸ್ವರೂಪವು ಟಿ20 ಆಗಿದೆ. ಅದೇ ಸಮಯದಲ್ಲಿ, ಈ ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಆದಾಗ್ಯೂ, ಏಷ್ಯಾ ಕಪ್ ಗಿಂತ ಅಭಿಮಾನಿಗಳಲ್ಲಿ ಹೆಚ್ಚು ಕ್ರೇಜ್ ಏನೆಂದರೆ, ಈ ಬಾರಿ ಭಾರತ ಮತ್ತು ಪಾಕಿಸ್ತಾನ ಒಂದಕ್ಕಿಂತ ಹೆಚ್ಚು ಬಾರಿ ಸ್ಪರ್ಧಿಸಲಿದೆ. ಏತನ್ಮಧ್ಯೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದೊಡ್ಡ ಹೇಳಿಕೆಯನ್ನ ನೀಡಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತೌಸೀಫ್ ಅಹ್ಮದ್ ಪಾಕಿಸ್ತಾನದ ಟಿವಿ ಚಾನೆಲ್ʼವೊಂದರೊಂದಿಗಿನ ಸಂಭಾಷಣೆಯಲ್ಲಿ ಪಾಕಿಸ್ತಾನವು ಏಷ್ಯಾ ಕಪ್ʼಗಾಗಿ ಬಲಿಷ್ಠ ತಂಡವನ್ನ ರಚಿಸಿಲ್ಲ ಎಂದು ಹೇಳಿದರು. ಏಷ್ಯಾ ಕಪ್ ಗೆಲ್ಲುವ ಬದಲು ಭಾರತದ ವಿರುದ್ಧ 2 ರಿಂದ 3 ಪಂದ್ಯಗಳ ಮೇಲೆ ಪಾಕಿಸ್ತಾನದ ಗಮನವಿದೆ ಎಂದು ಅವರು ಹೇಳಿದ್ದಾರೆ.
ಏಷ್ಯಾಕಪ್ ಬಗ್ಗೆ ಪಾಕಿಸ್ತಾನಕ್ಕೆ ಕಾಳಜಿ ಇಲ್ಲ: ತೌಸೀಫ್ ಅಹ್ಮದ್
“ನೀವು ಉತ್ತಮ ತಂಡವನ್ನ ರಚಿಸಲು ಸಾಧ್ಯವಾಗದಿದ್ದರೆ, ಆ ತಂಡಕ್ಕೆ ಯಾವುದೇ ಆಧಾರವಿಲ್ಲ. ಕೆಲವು ಸಮಯದ ಹಿಂದೆ ಸೌದ್ ಶಕೀಲ್ ಸಮೀ ಕೆಲವು ಯುವ ಆಟಗಾರರನ್ನ ತಂಡಕ್ಕೆ ಕರೆತರಲಾಯಿತು, ಅವರೆಲ್ಲರೂ ಈಗ ಎಲ್ಲಿದ್ದಾರೆ? ಕಷ್ಟದ ಸಮಯದಲ್ಲಿ ತಂಡಕ್ಕೆ ಸಹಾಯಕ್ಕೆ ಬರುವ ಆಟಗಾರರು ಇಂದು ಇಲ್ಲ. ಅವರು ಏಷ್ಯಾ ಕಪ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ” ಎಂದರು.
ಇನ್ನು ಪಾಕಿಸ್ತಾನ ತಂಡವು ಏಷ್ಯಾ ಕಪ್ʼನಲ್ಲಿ ಉತ್ತಮ ಆಟವನ್ನ ಆಡಿ ಟ್ರೋಫಿಯನ್ನ ಗೆಲ್ಲಬೇಕೆಂದು ನಾವು ಬಯಸುತ್ತೇವೆ ಎಂದರು. ಶೊಯೇಬ್ ಮಲಿಕ್ ಅವ್ರನ್ನ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ನಾವು ಭಾವಿಸಿದ್ದೇವೆ. ಯಾಕಂದ್ರೆ, ಅವ್ರು ಕಷ್ಟದ ಸಮಯದಲ್ಲಿ ತಂಡಕ್ಕಾಗಿ ಕೆಲಸ ಮಾಡಬಹುದಾಗಿದ್ದ ಆಟಗಾರರಾಗಿದ್ದಾರೆ ಎಂದು ಹೇಳಿದರು.
ಆಗಸ್ಟ್ 28ರಂದು ಪಂದ್ಯ
ನಿಮ್ಮ ಮಾಹಿತಿಗಾಗಿ, 2022 ರ ಏಷ್ಯಾ ಕಪ್ ಈ ಬಾರಿ ಯುಎಇಯಲ್ಲಿ ನಡೆಯಲಿದ್ದು, ಭಾರತ ಮತ್ತು ಪಾಕಿಸ್ತಾನ ಆಗಸ್ಟ್ 28ರಂದು ನಡೆಯಲಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿ ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮೂರು ಬಾರಿ ಹೋರಾಟ ನಡೆಯಬಹುದು.