ನವದೆಹಲಿ: ಸ್ಪೈಸ್ ಜೆಟ್ ವಿಮಾನದಲ್ಲಿ ಧೂಮಪಾನದ ವೀಡಿಯೊವನ್ನು ರೆಕಾರ್ಡ್ ಮಾಡಿದ ನಂತರ ಹರಿಯಾಣದ social media influencer ಬಾಬಿ ಕಟಾರಿಯಾ ಈಗ ವಿವಾದಕ್ಕೆ ಸಿಲುಕಿಹಾಕೊಂಡಿದ್ದಾನೆ.
ದುಬೈನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಕಟಾರಿಯಾ ನವದೆಹಲಿಗೆ ಪ್ರಯಾಣಿಸಿ ಜನವರಿ 1, 2022 ರಂದು ಬಂದಿಳಿದಿದ್ದರು. ಅವರ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ಈ ವೀಡಿಯೊ ಲಭ್ಯವಿಲ್ಲದಿದ್ದರೂ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಈ ಹಿಂದೆ ವಿಮಾನಯಾನ ಭದ್ರತಾ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಕಟಾರಿಯಾ ಅವರು ವಿಮಾನದಲ್ಲಿ ಧೂಮಪಾನ ಮಾಡುತ್ತಿರುವ ವೈರಲ್ ವಿಡಿಯೋವನ್ನು ಆಗಸ್ಟ್ 11 ರಂದು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
New rule for Bobby kataria ? @JM_Scindia @DGCAIndia @CISFHQrs pic.twitter.com/OQn5WturKb
— Nitish Bhardwaj (@Nitish_nicks) August 11, 2022