ಕೆಎನ್ಎನ್ಡಿಜಿಟಲ್ ಡೆಸ್ಕ್ : ಉತ್ತರ ಪ್ರದೇಶದಲ್ಲಿ ವಿಷಾದಕಾರಿ ಘಟನೆ ನಡೆದಿದ್ದು, ಫಿರೋಜಾಬಾದ್ ಜಿಲ್ಲೆಯ ಕಾನ್ಸ್ಸ್ಟೇಬಲ್ ಒಬ್ಬರು ದುಃಖ ತಡೆಯದೇ ಎಲ್ಲರ ಮುಂದೆ ಕಣ್ಣೀರಿಟ್ಟಿದ್ದಾರೆ. ಅಧಿಕಾರಿಗಳು ನೀಡುತ್ತಿರುವ ಆಹಾರದ ಗುಣಮಟ್ಟವನ್ನ ಸರಿಯಾಗಿ ಪಾಲಿಸುತ್ತಿಲ್ಲ ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ.
ಮನೋಜ್ ಕುಮಾರ್ ಎಂಬ ಸ್ಥಳೀಯ ಕಾನ್ ಸ್ಟೇಬಲ್ ಎಲ್ಲರ ಮುಂದೆ ತಮ್ಮ ದುಃಖ ಹಂಚಿಕೊಂಡಿದ್ದು, ರಸ್ತೆಯಲ್ಲೇ ನಿಂತು ಪೊಲೀಸ್ ಮೆಸ್ನಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಖಾರವಾಗಿ ದೂರಿದ್ದಾಋಎ. ಮೂಖ ಜೀವಿಗಳೂ ಇಂತಹ ಆಹಾರವನ್ನ ತಿನ್ನುವುದಿಲ್ಲ ಎಂದು ಕಣ್ಣಿರಿಟ್ಟಿದ್ದಾರೆ.
ಅಲ್ಲಿದ್ದ ನೌಕರರು ಮತ್ತು ಹಿರಿಯ ಅಧಿಕಾರಿಗಳು ಅವರನ್ನ ಸಂತೈಸಲು ಪ್ರಯತ್ನಿಸಿರಾದ್ರೂ ಪೇದೆ ದುಃಖ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಈ ಬಗ್ಗೆ ದೂರಿದ್ರೆ ಅಮಾನತು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿದ್ದಾರೆ. ಇದೀಗ ಈ ಘಟನೆ ವಿಡಿಯೋ ವೈರಲ್ ಆಗಿದ್ದು, ಮೇಲಧಿಕಾರಿಗಳು ಪೂರ್ಣ ಪ್ರಮಾಣದ ತನಿಖೆ ನಡೆಸಿ ವರದಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎನ್ನಲಾಗಿದೆ.
ವೈರಲ್ ವಿಡಿಯೋ ನೋಡಿ..!
Here is an example… words of UP Police constable Manoj Kumar in Firozabad pic.twitter.com/YkzzJSOyBJ
— The Fact Finder (@TheFactFindr) August 10, 2022