ರಾಮನಗರ :ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಮಗೇನು ಸಂಬಂಧ ಅವ್ರು ಮುಖ್ಯಮಂತ್ರಿ ಇಟ್ಕೊಳ್ತಾರೊ ಬುಡ್ತಾರೊ ನನಗೇನು..? ಎಂದು ಹೇಳಿದ್ದಾರೆ.
BIGG NEWS: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಆಕೆ ಸಹೋದರನಿಗೆ ಹಿಗ್ಗಾಮುಗ್ಗಾ ಥಳಿತ
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನನಗೆ 2023 ರ ಚುನಾವಣೆ ಬಗ್ಗೆ ಗಮನ ಇರೋದು. ರಾಜಕೀಯದಲ್ಲಿ ಹಲವಾರು ಮಾಹಿತಿ ಹೊರಬರುತ್ತುದೆ. ಅವರ ಪಕ್ಷದಲ್ಲಿ ಹಲವಾರು ಆಂತರಿಕ ಬೆಳವಣಿಗೆ ಇರಬಹುದು. ಅದನ್ನ ಕಟ್ಟಿಕೊಂಡು ನನಗೇನು ಆಗಬೇಕು ಎಂದಿದ್ದಾರೆ.
BIGG NEWS: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಆಕೆ ಸಹೋದರನಿಗೆ ಹಿಗ್ಗಾಮುಗ್ಗಾ ಥಳಿತ
ನನಗೆ ಬೇಕಿರೋದು ಜನರ ಬದುಕು. ಕಷ್ಟದಲ್ಲಿ ಜನರಿಗೆ ಸಹಾಯ ಆಗಬೇಕು. ಯಾರು ಮುಖ್ಯಮಂತ್ರಿ ಆದ್ರೂ ನನಗೇನು. ನನ್ನ ಆದ್ಯತೆ ಜನರ ಬದುಕು ಕಟ್ಟಿಕೊಡಿ ಎನ್ನೋದು ಎಂದು ಹೇಳಿದ್ದಾರೆ.