ಕೇರಳ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಪ್ರಯಾಣಿಸುವಾಗ ಗೂಗಲ್ ಮ್ಯಾಪ್ ಬಳಸುತ್ತಾರೆ. ರಸ್ತೆಗಳನ್ನ ಬೇರೆಯವರ ಹತ್ರ ಕೇಳುವ ಅವಶ್ಯಕತೆಯೇ ಇಲ್ಲ ಎಂದುಕೊಂಡು ಗೂಗಲ್ ಮ್ಯಾಪ್ ನೋಡಿಕೊಂಡೇ ವಾಹನ ಚಾಲನೆ ಅದೇಷ್ಟು ಮಂದಿ ಇದ್ದಾರೆ.
ಕೆಲವೊಮ್ಮೆ ಇದರಿಂದ ಅಪಾಯ ಕೂಡ ಉಂಟಾಗುತ್ತದೆ. ಇಂತಹ ಘಟನೆಗೆ ಇಲ್ಲೊಂದು ಕುಟುಂಬ ಸಾಕ್ಷಿಯಾಗಿದೆ. ಹೌದು ಕೇರಳದ ಕುಟುಂಬವೊಂದು ದುರಂತಕ್ಕೀಡಾಗಿದ್ದಾರೆ. ಅವರು ಕಾರಿನಲ್ಲಿ ಗೂಗಲ್ ಮ್ಯಾಪ್ ಹಾಕಿಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಕಾರು ಕೊಟ್ಟಾಯಂ ಬಳಿಯ ಪರಚಲ್ ಎಂಬಲ್ಲಿ ಕಾಲುವೆಗೆ ಉರುಳಿದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕುಟುಂಬವು ನಿನ್ನೆ ರಾತ್ರಿ 10:30 ರ ಸುಮಾರಿಗೆ ಎರ್ನಾಕುಲಂನಿಂದ ಕುಂಭನಾಡಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಹಾಯಕ್ಕೆ ಬರುವ ಮೊದಲು ಕಾರು 300 ಮೀಟರ್ ನೀರಿನಲ್ಲಿ ತೇಲಿಹೋಗಿದ್ದರಿಂದ ಈ ಘಟನೆಯು ನಡೆದಿತ್ತು. ಸ್ಥಳೀಯರು ಕಾರನ್ನು ಹಗ್ಗದಿಂದ ಕಟ್ಟಿದರು ಮತ್ತು ಕುಟುಂಬದ ನಾಲ್ಕು ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಂಡಿದ್ದಾರೆ