ಬೆಂಗಳೂರು : ಆಗಸ್ಟ್ 15 ರಂದು 75ನೇ ಸ್ವಾತಂತ್ರೊತ್ಸವದ ಅಮೃತ ಮಹೋತ್ಸವ ಆಚರಣೆ ನಡೆಯುತ್ತಿದೆ. ಜತೆಗೆ ಬಿಎಂಟಿಸಿ ಆರಂಭಗೊಂಡು 25 ವರ್ಷ ತುಂಬಿದೆ. ಈ ಎರಡು ಸಂಭ್ರಮಾಚರಣೆ ಹಿನ್ನೆಲೆ ಆಗಸ್ಟ್ 15 ರಂದು ಬೆಂಗಳೂರಿನಲ್ಲಿಇಡೀ ದಿನ 24 ಗಂಟೆಗಳ ಕಾಲ ʻ ಬಿಎಂಟಿಸಿ ಬಸ್ ಉಚಿತ ಬಸ್ ಪ್ರಯಾಣ ʼ ಎಂದು ಘೋಷಣೆ ಮಾಡಿದೆ
ಉಚಿತ ಬಸ್ ಪ್ರಯಾಣ ಕೊಟ್ಟರೆ ಬಿಎಂಟಿಸಿಗೆ 3 ಕೋಟಿ ಲಾಸ್ ಆಗುತ್ತಿದ್ದರೂ ಇದೀಗ ಆಗಸ್ಟ್ 14ರಂದು 24 ಗಂಟೆಗಳ ಕಾಲ ಐಟಿಸಿಟಿಯಲ್ಲಿ ಬಿಎಂಟಿಸಿ ಬಸ್ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ 90 ಎಲೆಕ್ಟ್ರಿಕ್ ಬಸ್ ಓಡಾಟ ಮಾಡುತ್ತಿದೆ. ಇದೀಗ ಅದರ ಜತೆಗೆ 75 ಹೊಸ ಎಲೆಕ್ಟ್ರಿಕ್ ಬಸ್ ಸೇರ್ಪಡೆಗೊಳ್ಳಲಿದೆ. ಜತೆಗೆ ಕಳೆದ ವರ್ಷ ಒಂದೇ ಒಂದು ಅಪಘಾತ ಮಾಡದೇ ಬಿಎಂಟಿಸಿ ಬಸ್ ಚಾಲಯಿಸಿದ ಟ್ರೈವರ್ ಹಾಗು ಕಂಡೆಕ್ಟರ್ ಗೆ ಚಿನ್ನದ ಪದಕ ನೀಡುವ ಮೂಲಕ ಗೌರವಿಸಲು ಮುಂದಾಗಿದೆ.