ಬೆಂಗಳೂರು: ಸಿಎಂ ಬದಲಾವಣೆ ಆಗೋಲ್ಲ ಬಾಕಿ ಉಳಿದಿರುವ 8 ತಿಂಗಳು ಬಸವರಾಜ ಬೊಮ್ಮಾಯಿ ಅವರೇ ಇರುತ್ತಾರೆ ಅಂಥ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಕೆಲವು ದಿನಗಳಿಂದ ಕೇಳಿ ಬರುತ್ತಿರುವ ಸಿಎಂ ಬದಲಾವಣೆ ಕೇವಲ ಊಹಪೋಹಾ ಅಂತ ಹೇಳಿದರು. ಇನ್ನೂ ಕಾಂಗ್ರೆಸ್ ಕಳೆದ ಹದಿನೈದು ದಿವಸದಿಂದ ಮೂರನೇ ಸಿಎಂ ಅನ್ನೋ ಹೇಳಿಕೆಯನ್ನು ನೀಡುತ್ತಿದ್ದು, ಇದು ಬಿಜೆಪಿಯಲ್ಲಿ ತಳಮಳ ಉಂಟು ಮಾಡಿದೆ.
ಕಟೀಲ್ ಅವರ ಬದಲಾವಣೆಗೆ ಸಂಬಂಧಪಟ್ಟಂತೆ ಅದು ಸಹಜ ಬದಲಾವಣೆಯಾಗಿದ್ದು, ಆ ಬಗ್ಗೆ ಹೈಕಮಾಂಡ್ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಅಂತ ಅವರು ಇದೇ ವೇಳೇ ಹೇಳಿದರು. ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಇಲ್ಲಿಗೆ ನಿಲ್ಲ ಬೇಕು ಅಂತ ಹೇಳಿದರು.
ಈ ನಡುವೆ ಕಟೀಲ್ ಅವಧಿ ಮುಗಿದ ಬಳಿಕ ರಾಜ್ಯಾಧ್ಯಕ್ಷದ ಸ್ಥಾನದಲ್ಲಿ ಸಿಟಿ ರವಿ, ಶೋಭಾ ಕರಂದ್ಲಾಜೆ ಮತ್ತು ಸುನೀಲ್ ಕುಮಾರ್ ಅವರು ರೇಸ್ನಲ್ಲಿ ಇದ್ದು, ಸದ್ಯ ಸದ್ಯ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಸಿಟಿ ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ನೀಡಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಇದಲ್ಲದೇ ಕಟ್ಟ ಆರ್ಎಸ್ಎಸ್ ಬೆಂಬಲಿಗರು, ಮತ್ತು ಕಟ್ಟಾ ಹಿಂದೂ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಬಿಜೆಪಿ ನೀಡಲು ಮುಂದಾಗಿದೆ ಎನ್ನಲಾಗಿದೆ.