ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸೊಲ್ಲಾಪುರ ಜಿಲ್ಲೆಯ ಅಕ್ಕಲ್ಕೋಟ್ ತಾಲೂಕಿನ ಹರ್ನಾ ನದಿ ಪ್ರವಾಹಕ್ಕೆ ಸಿಲುಕಿ, ನದಿಗಳ ಹರಿವಿನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಿತಾಪುರ್ ಮತ್ತು ಅಕಂತಲಾ ಎಂಬ ಎರಡು ಗ್ರಾಮಗಳನ್ನು ಸಂಪರ್ಕಿಸುವ ಈ ಸೇತುವೆಯ ಎತ್ತರವು ತುಂಬಾ ಕಡಿಮೆ ಇರುವುದರಿಂದ ದೊಡ್ಡ ಸಮಸ್ಯೆ ಎದುರಾಗಿದ್ದು, ಸಾವಿನ ನಂತರವೂ ಚಿತ್ರಹಿಂಸೆ ಅನುಭವಿಸುವಂತಹ ʻಹೃದಯ ವಿದ್ರಾವಕ ʼ ಘಟನೆಯೊಂದು ಬೆಳಕಿಗೆ ಬಂದಿದೆ.
ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಅಂತ್ಯಸಂಸ್ಕಾರವನ್ನು ಮಾಡಲು ಗ್ರಾಮಸ್ಥರು ತಮ್ಮ ಜೀವದ ಹಂಗು ತೊರೆದು ಮೃತ ದೇಹವನ್ನು ನೀರಿನ ಹರಿನ ನಡುವೆಯೇ ಹೊತ್ತು ನದಿಯ ಇನ್ನೊಂದು ಬದಿಗೆ ತೆಗೆದುಕೊಂಡು ಹೋಗುವ ದುಸ್ಸಾಹಸ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪಿತಾಪುರದ ನಿವಾಸಿ ನೂರ್ ಅಲಿ ಸಾಹೇಬ್ ಅಲಿ ಭಂಡಾರಿ ಶವವಾಗಿ ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.
सोलापूर : अक्कलकोट येथील हरणा नदीला पूर आल्याने अंत्ययात्रा पुराच्या पाण्यातून काढावी लागली.#flood #heavyrain pic.twitter.com/WZy7WfwtjL
— LoksattaLive (@LoksattaLive) August 9, 2022
ಪಿತಾಪುರ ಮತ್ತು ಅಕಂತಲಾ ಎಂಬ ಎರಡು ಗ್ರಾಮಗಳನ್ನು ಸಂಪರ್ಕಿಸುವ ಸೇತುವೆಯ ಎತ್ತರವು ಕಡಿಮೆಯಿದೆ ಮತ್ತು ಗ್ರಾಮಸ್ಥರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿದೆ. ಪಿತಾಪುರದ ಗ್ರಾಮಸ್ಥರನ್ನು ಶವವೊಂದನ್ನು ಚಿತಾಗಾರಕ್ಕೆ ತೆರಳಲು ನದಿ ನೀರಿನ ಮೇಲೆಯೇ ಕರೆದೊಯ್ಯಲಾದ ಘಟನೆ ಸೋಲಾಪುರ ಜಿಲ್ಲೆಯಲ್ಲಿನಡೆದಿದೆ. ಈ ಅಘಾತಕಾರಿ ಘಟನೆಯ ಬಳಿಕ ಎರಡು ಗ್ರಾಮಗಳನ್ನು ಸಂಪರ್ಕಿಸುವ ಸೇತುವೆಯ ಎತ್ತರವನ್ನು ಹೆಚ್ಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.