ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರಪಂಚದಾದ್ಯಂತದ ವಿವಾಹ ಸಂಪ್ರದಾಯಗಳು ತಮ್ಮದೇ ಆದ ವಿಶಿಷ್ಟ ಆಚರಣೆಗಳನ್ನು ಹೊಂದಿವೆ. ಈಗ, ನೇಪಾಳದಿಂದ ಅಂತಹ ಒಂದು ಆಚರಣೆಯ ವೀಡಿಯೊ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ, ಮದುವೆ ಮಂಟಪದಲ್ಲಿ ವಧು-ವರ ಕುಳಿತಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಇಬ್ಬರೂ ಪರಸ್ಪರ ಜಗಳವಾಡಲು ಪ್ರಾರಂಭಿಸುತ್ತಾರೆ. ಯಾಕಂದ್ರೆ, ಅವರಿಬ್ಬರೂ ಒಬ್ಬರಿಗೊಬ್ಬರು ತಾನು ಮೊದಲು ಆಹಾರ ತಿನ್ನಿಸಬೇಕೆನ್ನುವ ಭರದಲ್ಲಿ ಹೀಗೆ ಮಾಡುತ್ತಾರೆ. ಇದು ಇಲ್ಲಿನ ಆಚರಣೆ ಎಂದು ಹೇಳಲಾಗುತ್ತದೆ. ಕ್ಲಿಪ್ನ ಕೊನೆಯಲ್ಲಿ ವರನು ನಗುತ್ತಿರುವಂತೆ ಕಾಣುತ್ತಾನೆ. ಏಕೆಂದರೆ, ಹೆಂಡತಿ ಬಲವಂತವಾಗಿ ಅವನಿಗೆ ಮೊದಲು ಆಹಾರ ತಿನ್ನಿಸಿರಬಹುದು.
View this post on Instagram
ಸಾಮಾಜಿಕ ಮಾಧ್ಯಮದಲ್ಲಿ, ವೀಡಿಯೊ 70,000 ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.