ಕರಾಚಿ : ಪಾಕಿಸ್ತಾನದ ಕರಾಚಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬ ಗರ್ಭಿಣಿ ಮಹಿಳೆಗೆ ಕಪಾಳಮೋಕ್ಷ ಮಾಡಿ, ತಳಿಸಿದ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಸಧ್ಯ ಕಿರಾತನನ್ನ ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗುಲಿಸ್ತಾನ್-ಎ-ಜೌಹಾರ್ ಪ್ರದೇಶದ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಗಾರ್ಡ್ ಒರ್ವ ಮಹಿಳೆಯನ್ನ ಥಳಿಸಿದ್ದಾನೆ ಎಂದು ಪಾಕಿಸ್ತಾನ ಮೂಲದ ಸುದ್ದಿವಾಹಿನಿ ವರದಿ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಭದ್ರತಾ ಸಿಬ್ಬಂದಿ ಮಹಿಳೆಯೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನ ತೋರಿಸುತ್ತದೆ. ನಂತ್ರ ಆತ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ. ಮಹಿಳೆ ನೆಲಕ್ಕೆ ಬಿದ್ದು ಎದ್ದೇಳಲು ಪ್ರಯತ್ನಿಸುತ್ತಿದ್ದಂತೆ, ಆ ವ್ಯಕ್ತಿ ಅವಳ ಮುಖಕ್ಕೆ ಒದ್ದಿದ್ದಾನೆ.
ಈ ಗರ್ಭಿಣಿ ಮಹಿಳೆ ಗುಲಿಸ್ತಾನ್-ಎ-ಜೌಹಾರ್ನ ನೋಮನ್ ಗ್ರ್ಯಾಂಡ್ ಸಿಟಿಯಲ್ಲಿ ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾಖೆ. ಆಕೆಯ ಪ್ರಕಾರ, ಆಗಸ್ಟ್ 5ರಂದು ಮುಂಜಾನೆ 3 ಗಂಟೆಗೆ, ಆಕೆ ತನ್ನ ಮಗನನ್ನು ತನ್ನ ಆಹಾರವನ್ನ ತಲುಪಿಸಲು ಕೇಳಿದ್ದಳು. ಆದಾಗ್ಯೂ, ಅವರ ಮಗ ಅಪಾರ್ಟ್ಮೆಂಟ್ನ ಆವರಣವನ್ನ ಪ್ರವೇಶಿಸಲು ಪ್ರಯತ್ನಿಸಿದಾಗ, ಸಂಘದ ಪದಾಧಿಕಾರಿಯಾದ ಅಬ್ದುಲ್ ನಾಸಿರ್, ಆದಿಲ್ ಖಾನ್ ಮತ್ತು ಮಹಮೂದ್ ಖಲೀಲ್ ಅವರನ್ನು ಪ್ರವೇಶಿಸದಂತೆ ನಿಷೇಧಿಸಿದರು.
“ನಾನು ವಿಚಾರಿಸಲು ಬಂದಾಗ, ಆದಿಲ್ ಕೋಪಗೊಂಡು ನನ್ನನ್ನ ನಿಂದಿಸಲು ಪ್ರಾರಂಭಿಸಿದನು. ನಂತರ, ನನ್ನನ್ನು ಹೊಡೆಯುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದೆ. ನಾನು 5-6 ತಿಂಗಳ ಗರ್ಭಿಣಿ. ಅವರು ನನಗೆ ಹೊಡೆದಾಗ, ನೋವಿನಿಂದಾಗಿ ನಾನು ಪ್ರಜ್ಞಾಹೀನನಾದೆ” ಎಂದು ಹೇಳಿದ್ದಾಳೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೆಕ್ಯುರಿಟಿ ಗಾರ್ಡ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಏತನ್ಮಧ್ಯೆ, ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ. “ಕಾವಲುಗಾರನಿಗೆ ಆ ಹೆಂಗಸಿನತ್ತ ಕೈ ಎತ್ತುವ ಮತ್ತು ಹಿಂಸಾತ್ಮಕವಾಗಿ ವರ್ತಿಸುವ ಧೈರ್ಯ ಹೇಗೆ ಬಂತು?” ಎಂದು ಪ್ರಶ್ನಿಸಿದ್ದಾರೆ.
ವಿಡಿಯೋ ನೋಡಿ..!
کراچی گلستان جوہر بلاک 17 میں اپارٹمنٹ کے سیکیورٹی گارڈ نے پہلے خاتون کی تذلیل کی پھر تھپڑ اور لات مار کر بے ہوش کردیا، بے غیرتی کی انتہا کہ پاس بیٹھے لوگ بجائے بیچ بچاو کروانے کے معاملہ دیکھ کر کھسکنے لگے، کہاں ہیں انسانی حقوق والے؟ @SyedaShehlaRaza@PoliceMediaCell pic.twitter.com/WVOIG0TeYr
— Nazir Shah (@SsyedHhussain) August 8, 2022