ಬೆಂಗಳೂರು : ರಾಜ್ಯದಲ್ಲಿ ʻಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆʼ ವದಂತಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಆಂತರಿಕ ವಿಚಾರವಾದರೂ ಭ್ರಷ್ಟಾಚಾರ ಮಿತಿಮೀರಿದೆ. ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ವದಂತಿಯಾಗುತ್ತಿರುವುದನ್ನು ಕಂಡು ರಾಜ್ಯ ಬಿಜೆಪಿ ಸರ್ಕಾರವೇ ಗೊಂದಲದ ಗೂಡಾಗಿದೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಗೊಂದಲಕ್ಕೆ ಸಿಲುಕಿದೆ ಎದು ಡಿಕೆಶಿ ʼವ್ಯಂಗ್ಯವಾಡಿದ್ದಾರೆ.