ಬೆಂಗಳೂರು : ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಿಸುತ್ತೇವೆ ತಾಕತ್ತಿದ್ದರೆ ತಡೀರಿ ಎಂದು ಶ್ರೀರಾಮಸೇನೆ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಸವಾಲ್ ಹಾಕಿದೆ.
BIG BREAKING NEWS: ನಿರ್ಮಾಪಕರಿಗೆ ‘ನಟ ದರ್ಶನ್’ ಜೀವ ಬೆದರಿಕೆ: ಎಫ್ಐಆರ್ ದಾಖಲು
ಚಾಮರಾಜಪೇಟೆ ಶಾಸಕ ಜಮೀರ್ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ. ಆದರೆ ಸ್ವಾತಂತ್ರ್ಯೋತ್ಸವವನ್ನು ನಾವೇ ಅದ್ಧೂರಿಯಾಗಿ ಆಚರಿಸುತ್ತೇವೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಶ್ರೀರಾಮ ಸೇನೆ, ಅದು ಈದ್ಗಾ ಮೈದಾನವಲ್ಲ. ಅಲ್ಲಿರುವುದು ಬಿಬಿಎಂಪಿ ಆಟದ ಮೈದಾನ. ಗಣೇಶೋತ್ಸವವನ್ನು ಅಲ್ಲೇ ಮಾಡುತ್ತೇವೆ. ತಾಕತ್ತಿದ್ದರೆ ತಡೀರಿ ಎಂದು ಪೋಸ್ಟರ್ ಹಾಕಿದೆ.
BIG BREAKING NEWS: ನಿರ್ಮಾಪಕರಿಗೆ ‘ನಟ ದರ್ಶನ್’ ಜೀವ ಬೆದರಿಕೆ: ಎಫ್ಐಆರ್ ದಾಖಲು
ಚಾಮರಾಜಪೇಟೆಯಲ್ಲಿರುವ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂ ಆದೇಶದ ಹೊರಡಿಸಿದ ಬೆನ್ನಲ್ಲೇ ಹಿಂದೂ ಸಂಘಟನೆಗಳು ಮುಸ್ಲಿಮರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ಯಾಕೆ ಈ ಜಾಗದಲ್ಲಿ ಅವಕಾಶ ಹಿಂದೂಗಳಿಗೆ ಕೊಡಿ, ನಾವು ಗಣೇಶೋತ್ಸವ ಆಚರಿಸುತ್ತೇವೆ ಎಂದು ವಾದವನ್ನು ಮುಂದಿಟ್ಟಿವೆ.