ಕೊಪ್ಪಳ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ನ್ಯಾಷನಲ್ ಮೈನಾರಿಟಿ ಸ್ಕಾಲರ್ಶಿಪ್ (ಎನ್.ಎಸ್.ಪಿ) ವಿದ್ಯಾರ್ಥಿವೇತನ ಯೋಜನೆಯಡಿ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
2022-23 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ನ್ಯಾಷನಲ್ ಮೈನಾರಿಟಿ ಸ್ಕಾಲರ್ಶಿಪ್ (ಎನ್.ಎಸ್.ಪಿ) ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ & ಮೆರಿಟ್-ಕಮ್-ಮೀನ್ಸ್ ಹಾಗೂ ಬೇಗಂ ಹಜರತ್ ಮಹಲ್ ವಿದ್ಯಾರ್ಥಿವೇತನ ಮಂಜೂರಿಸಲಾಗುವುದು. ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಸೆಪ್ಟಂಬರ್ 30 ಕೊನೆಯ ದಿನವಾಗಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಅಕ್ಟೋಬರ್ 31 ರೊಳಗೆ, ಮೆರಿಟ್-ಕಮ್-ಮೀನ್ಸ್ ಮತ್ತು ಟಾಪ್ ಕ್ಲಾಸ್ನ ವಿದ್ಯಾರ್ಥಿಗಳು ಅಕ್ಟೋಬರ್ 31 ರೊಳಗೆ, ಬೇಗಂ ಹಜರತ್ ಮಹಲ್ನ ವಿದ್ಯಾರ್ಥಿಗಳು ಸೆಪ್ಟಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಆನ್ಲೈನ್ ಮೂಲಕ ವೆಬ್ಸೈಟ್ www.scholarships.gov.in ನಲ್ಲಿ ಸಲ್ಲಿಸಿ, ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ (ಹಾರ್ಡ್ ಕಾಪಿ) ಮೂಲ ಪ್ರತಿಯನ್ನು ಶಾಲೆ ಅಥವಾ ಕಾಲೇಜಿನಿಂದ ಧೃಢೀಕರಿಸಿ, ತಮ್ಮ ಶಾಲಾ, ಕಾಲೇಜಿನ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರಿಗೆ ಮೂಲ ಅರ್ಜಿಯನ್ನು ಸಲ್ಲಿಸಬೇಕು. ಮುಖ್ಯೋಪಾಧ್ಯಾಯರು/ ಪ್ರಾಚಾರ್ಯರು ಈ ಅರ್ಜಿಗಳನ್ನು ಎನ್.ಎಸ್.ಪಿ ಪೋರ್ಟಲ್ನಲ್ಲಿ ಶಾಲಾ/ ಕಾಲೇಜು ಲಾಗಿನ್ ಆಗಿ ಪರಿಶೀಲಿಸಿ, ಮುಂದಿನ ಹಂತಕ್ಕೆ ಕಳುಹಿಸಿಕೊಡಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ www.dom.karnataka.gov.in/koppal/public ನಲ್ಲಿ ಸಂಪರ್ಕಿಸಬಹುದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ ಕೋಕರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Big news: ಇಂದು ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ʻವೆಂಕಯ್ಯ ನಾಯ್ಡುʼ ಅವರಿಗೆ ಬೀಳ್ಕೊಡುಗೆ…