ಮಥುರಾ (ಉತ್ತರಪ್ರದೇಶ): ಲೈಂಗಿಕ ದೌರ್ಜನ್ಯ ಎಸಗುವುದನ್ನು ವಿರೋಧಿಸಿದ ಮಹಿಳೆಯ ತಲೆಗೆ ರಾಡ್ನಿಂದ ಹೊಡೆದು, ಆಕೆಯನ್ನು ಚಾಲಕ ಟ್ರಕ್ನಿಂದ ಹೊರಗೆ ಎಸೆದಿರುವ ಘಟನೆ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿನಡೆದಿದೆ.
ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಶ್ರೀಶ್ ಚಂದ್ರ ಮಾತನಾಡಿ, ಶನಿವಾರ ಮಹಿಳೆ (27) ಹೆದ್ದಾರಿಯಲ್ಲಿ ಸಾರಿಗೆಗಾಗಿ ಕಾಯುತ್ತಿದ್ದಾಗ ಕಂಟೈನರ್ ಟ್ರಕ್ನ ಚಾಲಕ ಆಕೆಗೆ ಲಿಫ್ಟ್ ನೀಡಿಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದಾನೆ. ಕೆಲವು ನಿಮಿಷಗಳ ನಂತರ, ಚಾಲಕ ಕಿರುಕುಳ ಮಹಿಳೆಗೆ ನೀಡಲು ಪ್ರಾರಂಭಿಸಿದ್ದಾನೆ. ಇದನ್ನು ವಿರೋಧಿಸಿ ಮಹಿಳೆ ಸಹಾಯಕ್ಕಾಗಿ ಕೂಗಿದಾಗ, ಕೆಲವರು ಟ್ರಕ್ ಅನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಇದನ್ನು ಕಂಡ ಚಾಲಕ ಸಂತ್ರಸ್ತೆಯ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು, ಚಲಿಸುತ್ತಿದ್ದ ಟ್ರಕ್ನಿಂದ ಎಸೆದಿದ್ದಾನೆ ಎಂದು ತಿಳಿಸಿದ್ದಾರೆ.
ಜನರು ಪೊಲೀಸರಿಗೆ ಮಾಹಿತಿ ನೀಡಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತರುವಾಯ, ಟ್ರಕ್ಅನ್ನು ಹಿಡಿಯಲಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ.
ಮಹಿಳೆ ಔಷಧೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕೋಸಿಕಲನ್ನಲ್ಲಿ ಔಷಧಿ ಸರಬರಾಜು ಮಾಡಿದ ನಂತರ ಸಾರಿಗೆಗಾಗಿ ಕಾಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
Breaking news: ರಾಜಸ್ಥಾನದ ಖಾತು ಶ್ಯಾಮ್ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಮೂವರು ಭಕ್ತರು ಬಲಿ, ಇಬ್ಬರಿಗೆ ಗಾಯ
`ನಮ್ಮ ಮೆಟ್ರೋ’ ಪ್ರಯಾಣಿರೇ ಗಮನಿಸಿ : ಇನ್ಮುಂದೆ ಬೆಳಿಗ್ಗೆ-ರಾತ್ರಿ 15 ನಿಮಿಷಕ್ಕೊಮ್ಮೆ ‘ರೈಲು ಸಂಚಾರ’