ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ನಾಯಕ ದೇವೇಂದ್ರ ಸಿಂಗ್ ಯಾದವ್(Devendra Singh Yadav) ಅವರ ಕಾರಿಗೆ ಟ್ರಕ್ವೊಂದು ಡಿಕ್ಕಿ ಹೊಡೆದು 500 ಮೀಟರ್ಗೂ ಹೆಚ್ಚು ದೂರ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ವಿಡಿಯೋದಲ್ಲಿ, ದೇವೇಂದ್ರ ಸಿಂಗ್ ಯಾದವ್ ಅವರು ಇದ್ದ ಕಾರ್ಗೆ ಟ್ರಕ್ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೇ, ಕಾರನ್ನು 500 ಮೀಟರ್ಗೂ ಹೆಚ್ಚು ದೂರ ಎಳೆದೊಯ್ದು ನಿಲ್ಲಿದೆ. ಈ ವೇಳೆ ಅಲ್ಲೇ ಇದ್ದವರು ಕಾರಿನ ಬಳಿ ಧಾವಿಸಿ ಸಮಾಜವಾದಿ ಪಕ್ಷದ ನಾಯಕನನ್ನು ರಕ್ಷಿಸಲು ಯತ್ನಿಸುತ್ತಿರುವುದನ್ನು ನೋಡಬಹುದು.
ದೇವೇಂದ್ರ ಸಿಂಗ್ ಯಾದವ್ ಅವರು ಮೈನ್ಪುರಿಯ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದು, ಪಕ್ಷದ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಟ್ರಕ್ ಚಾಲಕ ಇಟಾವಾ ಮೂಲದವನಾಗಿದ್ದು, ಇದೀಗ ಆತನ್ನನ್ನು ಬಂಧಿಸಲಾಗಿದೆ. ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಮೈನ್ಪುರಿ ಕಮಲೇಶ್ ದೀಕ್ಷಿತ್ ತಿಳಿಸಿದ್ದಾರೆ.
BIGG BREAKING NEWS : ಮಂಗಳೂರಿನಲ್ಲಿ `ಪ್ರವೀಣ್ ನೆಟ್ಟಾರು’ ಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್!