ವರದಿ : ವಸಂತ ಬಿ ಈಶ್ವರಗೆರೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ( Karnataka Public Service Commission – KPSC ) ಕರೆಯಲಾಗಿದ್ದಂತ ವಿವಿಧ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ನಂತ್ರ, ಇದೀಗ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲು ವೇಳಾಪಟ್ಟಿಯನ್ನು ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಕೆಪಿಎಸ್ಸಿಯ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆಯೋಗದ ವತಿಯಿಂದ ನಡೆಸಲಾಗುತ್ತಿರುವ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ, ಅರ್ಹತಾ ಪಟ್ಟಿ ಪ್ರಕಟಿಸಲು, ಈ ಕೆಳಕಂಡಂತೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೀಗಿದೆ ಅರ್ಹತಾ ಪಟ್ಟಿ ಪ್ರಕಟಿಸಲಿರುವಂತ ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ತಾತ್ಕಾಲಿಕ ವೇಳಾಪಟ್ಟಿ
- ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ – 660 ಹುದ್ದೆ – ತಾಕ್ಕಾಲಿಕ ಅರ್ಹತಾ ಪಟ್ಟಿ 23-09-2022ರಂದು ಪ್ರಕಟ
- 330 ಲೋಕೋಪಯೋಗಿ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ ಹುದ್ದೆ – 15-09-2022ರಂದು ಪ್ರಕಟ
- ಸರ್ಕಾರದ ಸಚಿವಾಲಯ ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿನ ಪ್ರಾರೂಪಣಾ ಸಹಾಯಕರ 03 ಹುದ್ದೆಗಳ ತಾತ್ಕಾಲಿಕ ಪಟ್ಟಿ 3110-2022ರಂದು ಪ್ರಕಟ
- ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರ 26 ಹುದ್ದೆಗಳ ತಾತ್ಕಾಲಿಕ ಅರ್ಹತಾ ಪಟ್ಟಿ ದಿನಾಂಕ 31-10-2022ರಂದು ಪ್ರಕಟ
- ಪೌರಾಡಳಿತ ನಿರ್ದೇಶನಾಲಯದಲ್ಲಿನ ಅಕೌಂಟೆಂಟ್ 21 ಹುದ್ದೆಗಳ ಪಟ್ಟಿ 31-10-2022ರಂದು ಪ್ರಕಟ
- ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕ 72 ಹುದ್ದೆಗಳ ಪಟ್ಟಿ 31-10-2022ರಂದು ಪ್ರಕಟ
- ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿನ ಲೆಕ್ಕಪರಿಶೋಧಕ 20 ಹುದ್ದೆಗಳ ಪಟ್ಟಿ 31-10-2022ರಂದು ಪ್ರಕಟ
- ಪೌರಾಡಳಿತ ನಿರ್ದೇಶನಾಲಯದಲ್ಲಿನ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ 66 ಹುದ್ದೆಗಳ ಪಟ್ಟಿ 31-10-2022ರಂದು ಪ್ರಕಟ