ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಆಗಸ್ಟ್ 4 ರಂದು ನಿಗದಿಯಾಗಿದ್ದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಪದವಿಪೂರ್ವ (CUET UG) 2022 ಪರೀಕ್ಷೆಯನ್ನ 17 ರಾಜ್ಯಗಳ ಕೆಲವು ಕೇಂದ್ರಗಳಲ್ಲಿ ಮುಂದೂಡಲಾಗಿದೆ ಎಂದು ಘೋಷಿಸಿದೆ. ಆಡಳಿತಾತ್ಮಕ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಕ್ಯೂಇಟಿ-ಯುಜಿಯನ್ನು ಮುಂದೂಡಲಾಗಿದೆ ಎಂದು ಎನ್ಟಿಎ ಹೇಳಿದೆ. ಸಿಯುಇಟಿ-ಯುಜಿ ಪರೀಕ್ಷೆಯನ್ನು ಮುಂದೂಡಿದ ಅಭ್ಯರ್ಥಿಗಳಿಗೆ ಅದೇ ಪ್ರವೇಶ ಪತ್ರಗಳು ಮಾನ್ಯವಾಗಿರುತ್ತವೆ ಎಂದು ಏಜೆನ್ಸಿ ಹೇಳಿದೆ.
CUET-UG scheduled for Aug 4 postponed at few centres across 17 states due to administrative, technical reasons: National Testing Agency
— Press Trust of India (@PTI_News) August 4, 2022