ನವದೆಹಲಿ : ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿರುವ ಔಷಧ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು 1,400 ಕೋಟಿ ರೂ.ಗಳ ಮೌಲ್ಯದ 700 ಕೆಜಿ ಮೆಫೆಡ್ರೋನ್ ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸಿದ್ದಾರೆ.
ವರದಿಯ ಪ್ರಕಾರ, ಮುಂಬೈ ಅಪರಾಧ ವಿಭಾಗದ ಮಾದಕವಸ್ತು ವಿರೋಧಿ ಘಟಕ (ANC) ನಲಸೋಪಾರ (ಪಶ್ಚಿಮ) ದಲ್ಲಿರುವ ಮಾದಕವಸ್ತು ಘಟಕದ ಮೇಲೆ ದಾಳಿ ನಡೆಸಿ, ಮುಂಬೈ ಮತ್ತು ಅದರ ನೆರೆಹೊರೆಯ ಪ್ರದೇಶಗಳಲ್ಲಿ ಡ್ರಗ್ ಪೆಡ್ಲರ್ಗಳಿಗೆ ಸರಬರಾಜಾಗಬೇಕಿದ್ದ ನಿಷಿದ್ಧ ವಸ್ತುಗಳನ್ನ ವಶಪಡಿಸಿಕೊಂಡಿದೆ.
ವರದಿಯ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಸಾವಯವ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದು, ಪ್ರಯೋಗಗಳ ಮೂಲಕ ಮೆಫೆಡ್ರೋನ್ ಉತ್ಪಾದಿಸುವ ಸೂತ್ರವನ್ನ ಕಂಡುಕೊಂಡಿದ್ದಾನೆ ಎನ್ನಲಾಗ್ತಿದೆ. ಅದ್ರಂತೆ, ಈ ಪದವಿಧರ ಸೇರಿ ಇತರ ನಾಲ್ವರನ್ನ ಪೊಲೀಸರು ಬಂಧಿಸಿದ್ದು, ಅವ್ರಲ್ಲಿ ಒಬ್ಬ ಮಹಿಳೆಯೂ ಸೇರಿದ್ದಾಳೆ.