ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಮಾಣ ಏರಿಕೆಗೊಂಡಿದೆ. ಕಳೆದ 24 ಗಂಟೆಗಳಲ್ಲಿ 19,893 ಹೊಸ ಪ್ರಕರಣಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.
13,734 ಕೊರೊನಾ ಪ್ರಕರಣಗಳು ಮತ್ತು 34 ಸಾವುಗಳಾಗಿವೆ. ಆಗಸ್ಟ್ 3 ರಂದು ಭಾರತವು 17,135 ಕೋವಿಡ್ -19 ತೀವ್ರ ಏರಿಕೆ ಕಂಡುಬಂದಿದೆ.
ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಸಕ್ರಿಯ ಪ್ರಕರಣಗಳು ಈಗ 136,478 ರಷ್ಟಿದ್ದು, ಇದು ಒಟ್ಟು ಸೋಂಕಿನ ಶೇಕಡಾ 0.31 ರಷ್ಟಿದೆ.
ಚೇತರಿಕೆಯ ಪ್ರಮಾಣವು ಶೇಕಡಾ 98.50 ರಷ್ಟಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 43,424,029 ಆಗಿದೆ. ದೇಶದಲ್ಲಿ 53 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 526,530 ಕ್ಕೆ ತಲುಪಿದೆ.