ಬೆಂಗಳೂರು : ಬಿಬಿಎಂಪಿ ಚುನಾವಣೆ ಹಿನ್ನೆಲೆ ರಾಜ್ಯ ಸರ್ಕಾರ ಬಿಬಿಎಂಪಿಯ 243 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟಿಸಿದೆ. ಮೀಸಲಾತಿ ಆಕ್ಷೇಪಣೆಗೆ 7 ದಿನ ಕಾಲಾವಕಾಶ ನೀಡಲಾಗಿದೆ. 7 ದಿನದ ನಂತರ ಬರುವ ಆಕ್ಷೇಪಣೆಗೆ ಸ್ವೀಕರಿಸಲಾಗುವುದಿಲ್ಲ ಎಂದು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಮಂಜುನಾಥ್ ಆದೇಶ ಹೊರಡಸಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್: ʻಜೂಡೋʼದಲ್ಲಿ ʻತುಲಿಕಾ ಮಾನ್ʼಗೆ ಬೆಳ್ಳಿ| Tulika Maan Wins Silver
2011ರ ಜನಗಣತಿ ಆಧಾರದ ಮೇರೆಗೆ ವಿಧಾನಸಭಾ ಕ್ಷೇತ್ರ, ವಾರ್ಡ್ಗಳು ಹಾಗೂ ಮೀಸಲಾತಿಯನ್ನು ಪ್ರಕಟಿಸಿದೆ. ಈ ಮೀಸಲಾತಿ ಕುರಿತು ಯಾವುದೇ ಅಸಮಾಧಾನ ಇದ್ದಲ್ಲಿ ಅಧಿಸೂಚನೆ ಪ್ರಕಟಿಸಿದ ಒಂದುವಾರ ದಲ್ಲಿ ತಮ್ಮ ಆಕ್ಷೇಪಣೆಗಳನ್ನು ಒಂದು ವಾರದಲ್ಲಿ ಕಾರಣ ಸಹಿತ ಲಿಖಿತವಾಗಿ ದಾಖಲಿಸಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ-436, 4ನೇ ಮಹಡಿ, ವಿಕಾಸ ಸೌಧ, ಬೆಂಗಳೂರು-560 001 ಇಲ್ಲಿಗೆ ಸಲ್ಲಿಸಬಹುದು.