ಬರ್ಮಿಂಗ್ಹ್ಯಾಮ್: ಭಾರತದ ತೇಜಸ್ವಿನ್ ಶಂಕರ್(Tejaswin Shankar) ಅವರು ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ನಲ್ಲಿ ಪುರುಷರ ಹೈಜಂಪ್ ಫೈನಲ್ನಲ್ಲಿ ಬುಧವಾರ ಕಂಚಿನ ಪದಕ ಗೆದ್ದಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪುರುಷರ ಹೈಜಂಪ್ ಪದಕ ಗೆದ್ದ ಮೊದಲ ಭಾರತ ಎಂಬ ಹೆಗ್ಗಳಿಕೆಗೆ ಶಂಕರ್ ಪಾತ್ರರಾದರು.
HISTORIC FEAT 🤩
🇮🇳’s National Record holder @TejaswinShankar becomes the 1️⃣st ever Indian to clinch a 🏅 in high jump at #CommonwealthGames
He bags BRONZE 🥉in Men’s High Jump with the highest jump of 2.22m at @birminghamcg22 🔥#Cheer4India#India4CWG2022
1/1 pic.twitter.com/jby6KmiA2h— SAI Media (@Media_SAI) August 3, 2022
ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕಾಗಿ ಸ್ಪರ್ಧಿಸುತ್ತಿರುವ ತೇಜಸ್ವಿನ್ ಹೈಜಂಪ್ನಲ್ಲಿ 2.22 ಮೀ. ಎತ್ತರ ಜಿಗಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಇನ್ನೂ, ನ್ಯೂಜಿಲೆಂಡ್ನ ಹ್ಯಾಮಿಶ್ ಕೆರ್ ಚಿನ್ನ ಗೆದ್ದರೆ, ಆಸ್ಟ್ರೇಲಿಯಾದ ಬ್ರಾಂಡನ್ ಸ್ಟಾರ್ಕ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಈ ಇಬ್ಬರೂ 2.25 ಮೀಟರ್ಗಳಷ್ಟು ಎತ್ತರ ಜಿಗಿದಿದ್ದಾರೆ.
BIGG NEWS : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ : ಇಂದು ಸುಳ್ಯ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ
BIGG NEWS : ರೈತ ಸಮುದಾಯಕ್ಕೆ ಮಹತ್ವದ ಮಾಹಿತಿ : ಕಿಸಾನ್ ಸಮ್ಮಾನ್ ಯೋಜನೆಯಡಿ ಇ-ಕೆವೈಸಿ ಮಾಡಿಸಿ