ಕೊಚ್ಚಿ: ಕೇರಳದ ಐವರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೇರಳದ ಶಿಕ್ಷಕನೊಬ್ಬನಿಗೆ ಬುಧವಾರ 79 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 2.70 ಲಕ್ಷ ರೂ ದಂಡ ವಿಧಿಸಲಾಗಿದೆ.
ಕಣ್ಣೂರು ಜಿಲ್ಲೆಯ ಅಲಪದಂಬಾ, ಪೆರಿಂಗೋಮ್ನ ಚೂರ್ಲ್ ನಿವಾಸಿ ಪಿಇ ಗೋವಿಂದನ್ ನಂಬೂದಿರಿ ಅವರಿಗೆ ಥಾಲಿಪರಂಬ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಜೂನ್ 2013 ಮತ್ತು ಜನವರಿ 2014. ರ ನಡುವೆ ಗೋವಿಂದನ್ ಅವರು ತರಗತಿಯೊಳಗೆ ಶಾಲಾ ಬಾಲಕಿಯರನ್ನು ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪ ಎದುರಿಸುತ್ತಿದ್ದರು. ಪೋಕ್ಸೊ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಪಿ ಮುಜೀಬ್ ರೆಹಮಾನ್ ಅವರು ಈ ತೀರ್ಪನ್ನು ಪ್ರಕಟಿಸಿದ್ದಾರೆ.